HomeKarnatakaBIG NEWS: ಮಕ್ಕಳ ಪಾಲನಾ ಕೇಂದ್ರದಲ್ಲಿದ್ದ ಬಾಲಕಿ ಗರ್ಭಿಣಿ; ಮೂರು ಮಕ್ಕಳ ತಂದೆಯಿಂದಲೇ ಕೃತ್ಯ; ಆರೋಪಿ...

BIG NEWS: ಮಕ್ಕಳ ಪಾಲನಾ ಕೇಂದ್ರದಲ್ಲಿದ್ದ ಬಾಲಕಿ ಗರ್ಭಿಣಿ; ಮೂರು ಮಕ್ಕಳ ತಂದೆಯಿಂದಲೇ ಕೃತ್ಯ; ಆರೋಪಿ ಅರೆಸ್ಟ್

ಗದಗ: ಮಕ್ಕಳ ಪಾಲನಾ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತ ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದು, ಮೂರು ಮಕ್ಕಳ ತಂದೆಯೇ ನೀಚ ಕೃತ್ಯವೆಸಗಿರುವ ಘಟನೆ ಗದಗದಲ್ಲಿ ನಡೆದಿದೆ.

ಮಕ್ಕಳ ಪಾಲನಾ ಕೇಂದ್ರದಲ್ಲಿದ್ದ ಬಾಲಕಿ ಆಧಾರ್ ಕಾರ್ಡ್ ಮಾಡಿಸಲು ಮನೆಗೆ ಹೋಗಿದ್ದಳು. ಬಳಿಕ ವಾಪಸ್ ಬರುವಾಗ ಪರಿಚಯಸ್ಥ ವ್ಯಕ್ತಿಯೊಂದಿಗೆ ಬಂದಿದ್ದಳು. ಮನೆಯಿಂದ ವಾಪಸ್ ಆಗುವಾಗ ಪರಿಚಯಸ್ಥ ವ್ಯಕ್ತಿಯೇ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

35 ವರ್ಷದ ಮೂರು ಮಕ್ಕಳ ತಂದೆಯೇ ಈ ನೀಚ ಕೃತ್ಯವೆಸಗಿದ್ದಾನೆ. ಬಾಲಕಿ ಗರ್ಭಿಣಿಯಾಗುತ್ತಿದ್ದಂತೆ ವಿಷಯ ಬಹಿರಂಗವಾಗಿದೆ. ಆತಂಕಗೊಂಡ ಪಾಲನಾ ಕೇಂದ್ರದ ಸಿಬ್ಬಂದಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular