ಹಾಡಹಗಲೇ ಮಾರಕಾಸ್ತ್ರಗಳನ್ನು ಹಿಡಿದು ಬೀದಿಯಲ್ಲಿ ಹೊಡೆದಾಡಿಕೊಂಡ ಯುವಕರು

ಗದಗ: ಹಾಡಹಗಲೇ ಬೀದಿಯಲ್ಲಿ ಯುವಕರಿಬ್ಬರು ಮರಕಾಸ್ತ್ರಗಳಿಂದ ಹೊಡೆದಾಡಿಕೊಂಡಿರುವ ಘಟನೆ ಗದಗ ನಗರದ ಚನ್ನಮ್ಮ ಸರ್ಕಲ್ ನಲ್ಲಿ ನಡೆದಿದೆ.

ಹಣಕಾಸು ಹಾಗೂ ಕೌಟುಂಬಿಕ ಕಾರಣದಿಂದ ಇಬ್ಬರು ಯುವಕರು ಚಾಕು ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಫಕಿರೇಶ ನಂದಿಹಳ್ಳಿ ಹಾಗೂ ಗಂಗಾಧರ ಹಿರೇಮಠ ಹೊಡೆದಾಡಿಕೊಂಡ ಯುವಕರು.

ಮುಂಡರಗಿ ತಾಲೂಕಿನ ಚರ್ಚಿಹಾಳ ಗ್ರಾಮದ ನಿವಾಸಿಗಳಾದ ಇಬ್ಬರೂ ಗದಗ ನಾಗರದ ಹುಡೋ ಕಾಲೋನಿಯಲ್ಲಿ ನಾಲ್ಕು ವರ್ಷಗಳಿಂದ ವಾಸವಗಿದ್ದರು. ಇಬ್ಬರ ನಡುವೆ ಹಣಕಾಸು ವಿಚಾರವಾಗಿ ಜಗಳವಾಗಿತ್ತು. ಇದೇ ವೇಳೆ ಫಕಿರೇಶನ ಮಗಳು ಗಂಗಾಧರನ ಮನೆಗೆ ಬಂದು ನಮ್ಮ ತಂದೆ ನನ್ನನ್ನು ಹಾಗೂ ತಾಯಿಯನ್ನು ಚನ್ನಾಗಿ ನೋಡಿಕೊಳ್ಳುತ್ತಿಲ್ಲ. ತೊಂದರೆ ಕೊಡುತ್ತಾನೆ ಎಂದು ಅಳಲು ತೋಡಿಕೊಂಡಿದ್ದಳು.

ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಶುರುವುವಾಗಿದ್ದು, ನಡುಬೀದಿಯಲ್ಲಿ ಹೊಡೆದಾಡಿಕೊಳ್ಳುವ ಹಂತ ತಲುಪಿದೆ. ಫಕೇರೇಶನ ಕುತ್ತಿಗೆ, ಮುಖ, ಎದೆಗೆ ಗಂಗಾಧರ್ ಚಾಕುವಿನಿಂದ ಇರಿದಿದ್ದಾನೆ. ಗಾಯಾಳುವನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗದಗ ಶಹರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read