HomeKarnatakaಪ್ರಾಂಶುಪಾಲರ ಮೊಬೈಲ್ ಕದ್ದು ಲಕ್ಷಾಂತರ ರೂಪಾಯಿ ಹಣ ವರ್ಗಾಯಿಸಿಕೊಂಡು ಎಸ್ಕೇಪ್ ಆದ ಖದೀಮರು

ಪ್ರಾಂಶುಪಾಲರ ಮೊಬೈಲ್ ಕದ್ದು ಲಕ್ಷಾಂತರ ರೂಪಾಯಿ ಹಣ ವರ್ಗಾಯಿಸಿಕೊಂಡು ಎಸ್ಕೇಪ್ ಆದ ಖದೀಮರು

ಗದಗ: ಕಾಲೇಜು ಪ್ರಾಂಶುಪಾಲರೊಬ್ಬರ ಮೊಬೈಲ್ ಕದ್ದ ಕಳ್ಳರು ಆನ್ ಲೈನ್ ಮೂಲಕ ಅವರ ಖಾತೆಯಲ್ಲಿದ್ದ ಲಕ್ಷಾಂತರ ರೂಪಾ ಹಣ ವರ್ಗಾಯಿಸಿಕೊಂಡು ಪರಾರಿಯಾಗಿರುವ ಘಟನೆ ಗದಗ ಜಿಲ್ಲೆಯ ನರಗುಂದದಲ್ಲಿ ನಡೆದಿದೆ.

ಶ್ರೀಕಾಂತ್ ಕೃಷ್ಣಾಜಿ ಜೋಷಿ ಮೊಬೈಲ್ ಹಾಗೂ ಹಣ ಕಳೆದುಕೊಂಡ ಪ್ರಾಂಶುಪಾಲರು. ಎಂದಿನಂತೆ ಪ್ರಾಂಶುಪಾಲ ಶ್ರೀಕಾಂತ್ ಕೃಷ್ಣಾಜಿ ನರಗುಂದ ಪಣ್ಣಣದ ಬಸ್ ನಿಲ್ದಾಣದ ಮೂಲಕ ಕಾಲೇಜಿಗೆ ಹೋಗುತ್ತಿದ್ದರು. ಈ ವೇಳೆ ಅವರ ಜೇಬಿನಲ್ಲಿದ್ದ ಮೊಬೈಲ್ ನ್ನು ಕಳ್ಳರು ಕದ್ದಿದ್ದಾರೆ. ಬಳಿಕ ಮೊಬೈಲ್ ನಲ್ಲಿ ಆನ್ ಲೈನ್ ಮೂಲಕ ಯುಪಿಐ ಬಳಸಿಕೊಂಡು 1 ಲಕ್ಷದ 40 ಸಾವಿರ ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ.

ಒಟ್ಟು ಮೂರು ಹಂತದಲ್ಲಿ ಹಣ ವರ್ಗಾವಣೆ ಮಾಡಿಕೊಂಡು ಕಳ್ಳರು ನಾಪತ್ತೆಯಾಗಿದ್ದಾರೆ. ಪ್ರಾಂಶುಪಾಲ ಶ್ರೀಕಾಂತ್ ಕೃಷ್ಣಾಜಿ ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular