BIG NEWS: ಆಸ್ತಿ ಆಸೆಗೆ ತಮ್ಮನನ್ನೇ ಹತ್ಯೆಗೈದಿದ್ದ ಮೂವರು ಸಹೋದರರು ಅರೆಸ್ಟ್

ಗದಗ: ಆಸ್ತಿಗಾಗಿ ತಮ್ಮನನ್ನೇ ಬರ್ಬರವಾಗಿ ಕೊಲೆಗೈದಿದ್ದ ಮೂವರು ಅಣ್ಣಂದಿರನ್ನು ಗದಗ ಜಿಲ್ಲೆಯ ರೋಣ ಪೊಲೀಸರು ಬಂಧಿಸಿದ್ದಾರೆ.

ಲೋಕಪ್ಪ, ರೇವಣಪ್ಪ, ಬಸಪ್ಪ ಬಂಧಿತರು. ರೋಣ ಪಟ್ಟಣ ಬಳಿಯ ಜಮೀನಿನಲ್ಲಿ ಕೊಡಲಿಯಿಂದ ಕೊಚ್ಚಿ ತಮ್ಮನನ್ನೇ ಮೂವರು ಅಣ್ಣಂದಿರು ಹತ್ಯೆ ಮಾಡಿದ್ದರು. ಶೇಖಪ್ಪ ನವಲಗುಂದ ಮೃತ ದುರ್ದೈವಿ.

ಎರಡು ಎಕರೆ ಜಮೀನಿಗಾಗಿ ನಾಲ್ವರು ಸಹೋದರರ ನಡುವೆ ಗಲಾಟೆ ನಡೆದಿತ್ತು. ಎರಡು ಎಕರೆ ಜಮೀನಿನಲ್ಲಿ ಶೇಖಪ್ಪ ತನ್ನ ಪಾಲು ತನಗೆ ನೀಡುವಂತೆ ಕೇಳಿದ್ದ. ಇದೇ ವಿಚಾರವಾಗಿ ಗಲಾಟೆ ನಡೆದು ಶೇಖಪ್ಪನನ್ನೇ ಅಣ್ಣಂದಿರು ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read