ಜಾಲತಾಣ ಬಳಕೆದಾರರಿಗೆ ಗುಡ್ ನ್ಯೂಸ್: ದುರ್ಬಳಕೆ, ತೊಂದರೆಗಳಿಗೆ ಕಡಿವಾಣ: ಸರ್ಕಾರದಿಂದ ಮಹತ್ವದ ಕ್ರಮ

ನವದೆಹಲಿ: ಸಾಮಾಜಿಕ ಜಾಲತಾಣಗಳ ಕಡಿವಾಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ದೂರು ಮೇಲ್ಮನವಿಗೆ ಸಮಿತಿ ರಚಿಸಲಾಗಿದೆ. ಮಾರ್ಚ್ 1 ರಿಂದ ಸಮಿತಿಗಳು ಕಾರ್ಯಾರಂಭ ಮಾಡಲಿವೆ. ಇತ್ತೀಚಿಗೆ ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ಮೊದಲಾದ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗುತ್ತಿದ್ದು, ಇದರೊಂದಿಗೆ ದುರ್ಬಳಕೆ ಮತ್ತು ಅದರಿಂದ ಜನರಿಗೆ ತೊಂದರೆ ಆಗುತ್ತಿರುವ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ.

ಜಾಲತಾಣಗಳಿಂದ ತಮಗಾದ ತೊಂದರೆಯ ಬಗ್ಗೆ ಯಾರಿಗೆ ದೂರು ನೀಡಬೇಕೆಂದು ತಿಳಿಯದೆ ಜನ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಸಂಬಂಧಿತ ಜಾಲತಾಣ ಕಂಪನಿಗೆ ಆನ್ಲೈನ್ ಮೂಲಕ ದೂರ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಹಕರನ್ನು ಕಾಪಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.

ಬ್ಯಾಂಕುಗಳ ವಿರುದ್ಧ ಗ್ರಾಹಕರ ದೂರಗಳ ಇತ್ಯರ್ಥಕ್ಕೆ ಇರುವ ಒಬುಡ್ಸಮನ್ ರೀತಿಯಲ್ಲಿಯೇ ಸಾಮಾಜಿಕ ಜಾಲತಾಣಗಳ ಕಂಪನಿಗಳ ವಿರುದ್ಧ ದೂರು ವಿಚಾರಣೆಗೆ ಗ್ರೀವಿಯೆನ್ಸ್ ಅಪೆಲೆಟ್ ಕಮಿಟಿ(GAC) ಹೆಸರಲ್ಲಿ ಮೂರು ವಿಶೇಷ ಸಮಿತಿಗಳನ್ನು ರಚಿಸಲಾಗಿದ್ದು, ಮಾರ್ಚ್ 1 ರಿಂದ ಈ ಸಮಿತಿ ಕಾರ್ ಆರಂಭಿಸಲಿವೆ.

ಸೋಷಿಯಲ್ ಮೀಡಿಯಾ ಮತ್ತು ಇಂಟರ್ನೆಟ್ ಆಧಾರಿತ ವೇದಿಕೆಗಳ ವಿರುದ್ಧ ಬಳಕೆದಾರರು ನೀಡುವ ದೂರುಗಳಿಗೆ ಮೇಲ್ಮನವಿ ಪ್ರಾಧಿಕಾರಗಳ ರೀತಿಯಲ್ಲಿ ಈ ಸಮಿತಿಗಳು ಕೆಲಸ ಮಾಡಲಿವೆ. ಆನ್ಲೈನ್ ಕಂಪನಿಗಳಿಂದ ದೊರೆತ ಪ್ರತಿಕ್ರಿಯೆಯಿಂದ ತೃಪ್ತರಾಗದ ಗ್ರಾಹಕರು ಈ ಸಮಿತಿಗೆ ಮೇಲ್ಮನವಿ ಸಲ್ಲಿಸಬಹುದು. www.gac.gov.in ಪೋರ್ಟಲ್ ಮೂಲಕ ಆನ್ಲೈನ್ ನಲ್ಲಿ ದೂರು ಸಲ್ಲಿಸಬಹುದು. 30 ದಿನದೊಳಗೆ ಸಮಿತಿ ಗ್ರಾಹಕರ ದೂರನ್ನು ಇತ್ಯರ್ಥಪಡಿಸಲಾಗುವುದು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read