HomeKarnatakaಮುಂದುವರೆದ ಜಿ.ಟಿ.ದೇವೇಗೌಡ-ಸಾ.ರಾ ಮಹೇಶ್ ಟಾಕ್ ವಾರ್: ಹಾಗೆ ಹೇಳಿದ್ದೇ ಆದರೆ ರಾಜಕಾರಣವನ್ನೇ ಬಿಡುತ್ತೇನೆ ಎಂದು ಜಿಟಿಡಿ...

ಮುಂದುವರೆದ ಜಿ.ಟಿ.ದೇವೇಗೌಡ-ಸಾ.ರಾ ಮಹೇಶ್ ಟಾಕ್ ವಾರ್: ಹಾಗೆ ಹೇಳಿದ್ದೇ ಆದರೆ ರಾಜಕಾರಣವನ್ನೇ ಬಿಡುತ್ತೇನೆ ಎಂದು ಜಿಟಿಡಿ ಸವಾಲ್

ಮೈಸೂರು: ಉಪಚುನಾವಣೆ ಬಳಿಕ ಜೆಡಿಎಸ್ ನಾಯಕರ ಭಿನ್ನಮತ ಸ್ಫೋಟಗೊಂಡಿದೆ. ಹಿರಿಯ ಶಾಸಕ ಜಿ.ಟಿ.ದೇವೇಗೌಡ ಹಾಗೂ ಶಾಸಕ ಸಾ.ರಾ.ಮಹೇಶ್ ನಡುವಿನ ಮಾತಿನ ಸಮರ ತಾರಕ್ಕೇರಿದ್ದು, ಒಬ್ಬರಿಗೊಬ್ಬರು ಸವಾಲು ಹಾಕಿದ್ದಾರೆ.

ನನ್ನಿಂದ ರಾಜಕೀಯಕ್ಕೆ ತೊಂದರೆ ಆಗಿದೆ ಎಂದು ಭಾವಿಸಿದ್ದರೆ ಆಣೆ ಪ್ರಮಾಣ ಮಾಡಲು ಚಾಮುಂಡಿ ಬೆಟ್ಟಕ್ಕೆ ಬರಲಿ ಎಂದು ಶಾಸಕ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡರಿಗೆ ಸವಾಲು ಹಾಕಿದ್ದರು.

ಇದೀಗ ಸಾ.ರಾ.ಮಹೇಶ್ ಹೇಳಿಕೆಗೆ ಮೈಸೂರಿನಲ್ಲಿ ತಿರುಗೇಟು ನೀಡಿರುವ ಜಿ.ಟಿ.ದೇವೇಗೌಡ, ನನ್ನನ್ನು ಉಪಚುನಾವಣಾ ಪ್ರಚಾರಕ್ಕೆ ಕರೆದಿದ್ದೇನೆ ಎಂದು ಹೇಳಲಿ. ಹಾಗೆ ಹೇಳಿದರೆ ಅಂದೇ ನಾನು ರಾಜಕಾರಣವನ್ನು ಬಿಡುತ್ತೇನೆ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾ.ರಾ.ಮಹೇಶ್ ಸುಳ್ಳು ಹೇಳುವುದನ್ನು ನಿಲ್ಲಿಸಬೇಲ್ಕು. ಹೆಚ್.ಡಿ.ದೇವೇಗೌಡರು ನನ್ನನ್ನು ಉಪಚುನಾವಣಾ ಪ್ರಚಾರಕ್ಕೆ ಕರೆದಿದ್ದೆ ಎಂದು ಹೇಳಲಿ. ಅಂದೇ ರಾಜಕಾರಣ ಬಿಡುತ್ತೇನೆ ಎಂದಿದ್ದಾರೆ. ಸುಳ್ಲು ಹೇಳಿಕೊಂಡು ಚಾಮುಂಡಿ ಬೆಟ್ಟಕ್ಕೆ ಬಾ ಎಂದರೆ ಹೋಗಲು ಸಾಧ್ಯನಾ? ಈ ಹಿಂದೆ ವಿಶ್ವನಾಥ್ ಜೊತೆ ಚಾಮುಂಡಿ ಬೆಟ್ಟಕ್ಕೆ ಹೋಗಿ ಅವರ ಕಥೆ ಏನಾಯಿತು? ಎಂದು ಪ್ರಶ್ನಿಸಿದ್ದಾರೆ.

ನಾನು ಹೇಳುತ್ತಿರುವುದು ನಿಜ. ನಾನು ತಪ್ಪು ಮಾಡಿದ್ದರೆ ಒಪ್ಪಿಕೊಳ್ಳುತ್ತೇನೆ. ನಾನು ಯಾವುದಕ್ಕೂ ಹೆದರಲ್ಲ, ಸುಳ್ಳನ್ನು ಹೇಳಲ್ಲ. ಸಾ.ರಾ.ಮಹೇಶ್ ಸುಳ್ಳು ಹೇಳುವುದನ್ನು ಮೊದಲು ನಿಲ್ಲಿಸಲಿ ಎಂದರು.

For Latest News Updates, Join Our Whatsapp Community🚩
RELATED ARTICLES

Most Popular