HomeKarnatakaGood News: ರಾಮನಗರ, ಕನಕಪುರಕ್ಕೆ ಮಾ.4ರಿಂದ ಬಿಎಂಟಿಸಿ ಬಸ್‌

Good News: ರಾಮನಗರ, ಕನಕಪುರಕ್ಕೆ ಮಾ.4ರಿಂದ ಬಿಎಂಟಿಸಿ ಬಸ್‌

ರಾಮನಗರದ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಿದ್ದ ಕರ್ನಾಟಕ ಸರ್ಕಾರ ಈಗ ಜಿಲ್ಲೆಯ ಜನರಿಗೆ ಮತ್ತೊಂದು ಕೊಡುಗೆ ನೀಡಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳು ಮಾರ್ಚ್‌ 4ರಿಂದ ರಾಮನಗರಕ್ಕೆ ಸಂಚಾರವನ್ನು ನಡೆಸಲಿವೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜಿಲ್ಲಾ ಕೇಂದ್ರವಾದ ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಮಾರ್ಚ್ 4ರಂದು ಚಾಲನೆ ನೀಡಲಿದ್ದಾರೆ. ಈ ಮೂಲಕ ಹಲವು ವರ್ಷಗಳ ಬೇಡಿಕೆ ಈಡೇರಿದಂತೆ ಆಗಲಿದೆ.

ಬಿಎಂಟಿಸಿ ರಾಮನಗರಕ್ಕೆ 6, ಕನಕಪುರಕ್ಕೆ 8 ಸೇರಿ ಒಟ್ಟು 14 ವೋಲ್ವೋ ಎಸಿ ಎಲೆಕ್ಟ್ರಿಕ್‌ ಬಸ್‌ಗಳನ್ನು ನಿಯೋಜನೆ ಮಾಡಿದೆ. ಆದ್ದರಿಂದ ಇನ್ನು ಮುಂದೆ ಬಿಎಂಟಿಸಿ ಬಸ್‌ಗಳು ಬೆಂಗಳೂರು ಗಡಿ ವ್ಯಾಪ್ತಿಯಿಂದ 25 ಕಿ.ಮೀ. ದಾಟಿ ದೂರಕ್ಕೆ ಸಾಂಚಾರವನ್ನು ನಡೆಸಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಸ್ ಸಂಚಾರಕ್ಕೆ ಚಾಲನೆ: ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಾರ್ಚ್ 4ರ ಬುಧವಾರ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್, ರಾಮಲಿಂಗಾ ರೆಡ್ಡಿ ಬಸ್ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ.

ಬಿಎಂಟಿಸಿ ಬಸ್ ಸೇವೆಯನ್ನು 80 ಕಿ.ಮೀ. ತನಕ ವಿಸ್ತರಣೆ ಮಾಡಿದ್ದು, ರಾಮನಗರ ಮತ್ತು ಕನಕಪುರಕ್ಕೆ ಬಸ್ ಸಂಪರ್ಕ ಕಲ್ಪಿಸಲು ಸಹಾಯಕವಾಗಿದೆ. ಶೀಘ್ರದಲ್ಲಿಯೇ ನೆಲಮಂಗಲ, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರಕ್ಕೆ ಸಹ ಬಿಎಂಟಿಸಿ ಬಸ್ ಸೇವೆ ವಿಸ್ತರಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಈಗ ಮಾಗಡಿ, ಕನಕಪುರ, ರಾಮನಗರ ತಾಲೂಕಿನ ಕೆಲವು ಗ್ರಾಮಾಂತರ ಪ್ರದೇಶಕ್ಕೆ ಮಾತ್ರ ಬಿಎಂಟಿಸಿ ಬಸ್‌ಗಳಿವೆ. ಈಗ ಕನಕಪುರ ಮತ್ತು ರಾಮನಗರ ತಾಲೂಕು ಕೇಂದ್ರಗಳಿಗೆ ಬಿಎಂಟಿಸಿ ಬಸ್ ಸಂಪರ್ಕ ಕಲ್ಪಿಸಲಿದೆ.

ಬೆಂಗಳೂರು ನಗರಕ್ಕೆ ಆಗಮಿಸಲು ಮತ್ತು ವಾಪಸ್ ಆಗಲು ಬೆಳಗ್ಗೆ ಮತ್ತು ಸಂಜೆ ರಾಮನಗರ, ಕನಕಪುರಕ್ಕೆ ಬಿಎಂಟಿಸಿ ಬಸ್ ಸೌಲಭ್ಯ ಬೇಕು ಎಂಬ ಬೇಡಿಕೆ ಇತ್ತು. ಈ ಮನವಿಗೆ ಈಗ ಒಪ್ಪಿಗೆ ನೀಡಲಾಗಿದ್ದು, ಬಸ್ ಸಂಚಾರ ಆರಂಭವಾಗುತ್ತಿದೆ.

ಎಲ್ಲಿಂದ ಬಸ್‌ಗಳು?: ಕನಕಪುರಕ್ಕೆ ಮೆಜೆಸ್ಟಿಕ್, ಬನಶಂಕರಿ, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಬಿಎಂಟಿಸಿ ಬಸ್ ಸಂಚಾರವನ್ನು ನಡೆಸಲಿದೆ. ಬಿಎಂಟಿಸಿಯ ಸಂಚಾರ ದೂರ ವಿಸ್ತರಣೆ ಪ್ರಯಾಣಿಕರಿಗೆ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಮೊದಲ ಹಂತದಲ್ಲಿ ಸೀಮಿತ ನಿಲುಗಡೆಯೊಂದಿಗೆ ಬಸ್ ಓಡಿಸಲಾಗುತ್ತದೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ನಿಲುಗಡೆಗಳನ್ನು ಹೆಚ್ಚಿಸಲು ಬಿಎಂಟಿಸಿ ಚಿಂತನೆ ನಡೆಸಿದೆ.  ಬೆಂಗಳೂರು ನಗರಕ್ಕೆ ಆಗಮಿಸಲು, ವಾಪಸ್ ಆಗಲು ಈ ಬಸ್ ಸೇವೆ ಸಹಾಯಕವಾಗಲಿದೆ.

ಬಿಎಂಟಿಸಿ ವೋಲ್ವೋ ಬಸ್ ಐಷಾರಾಮಿ ಬಸ್ ಸೇವೆಯಾಗಿದೆ. ಆದ್ದರಿಂದ ಈ ಬಸ್‌ಗಳಲ್ಲಿ ‘ಶಕ್ತಿ’ ಯೋಜನೆ ಉಚಿತ ಟಿಕೆಟ್ ವ್ಯವಸ್ಥೆ ಇರುವುದಿಲ್ಲ. ಮಹಿಳೆಯರು ಸಹ ಟಿಕೆಟ್ ಪಡೆದು ಸಂಚಾರವನ್ನು ನಡೆಸಬೇಕಿದೆ.

ಉದ್ಯೋಗ, ವ್ಯಾಸಂಗ, ಆರೋಗ್ಯ ಸೇವೆಗಾಗಿ ಬೆಂಗಳೂರು ನಗರಕ್ಕೆ ಆಗಮಿಸುವ ಜನರಿಗೆ ಈ ಬಿಎಂಟಿಸಿ ಬಸ್ ಸೇವೆ ಉಪಯೋಗವಾಗಲಿದೆ. ಬಿಎಂಟಿಸಿ ಬಸ್ ಸಂಚಾರದಿಂದ ಈ ಮಾರ್ಗದಲ್ಲಿ ಸಂಚಾರ ನಡೆಸುವ ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular