HomeKarnatakaಕತ್ತೆಗಳನ್ನು ಕೊಡಿಸುವುದಾಗಿ ವಂಚನೆ; ದೂರು ದಾಖಲು

ಕತ್ತೆಗಳನ್ನು ಕೊಡಿಸುವುದಾಗಿ ವಂಚನೆ; ದೂರು ದಾಖಲು

ಚಿಕ್ಕಬಳ್ಳಾಪುರ: ಕತ್ತೆ ಕೊಡಿಸುವುದಾಗಿ ₹9.45 ಲಕ್ಷ ವಂಚನೆ

ಹಸು ಮತ್ತು ಕತ್ತೆಗಳನ್ನು ಸಾಕಿದ್ದ ಫಾರಂ ಒಂದರ ಮಾಲೀಕರಿಗೆ ಉತ್ತಮ ತಳಿಯ ಕತ್ತೆಗಳನ್ನು ಕೊಡಿಸುವುದಾಗಿ ಹೇಳಿ ಬರೋಬ್ಬರಿ 9.45 ಲಕ್ಷ ರೂಪಾಯಿಗಳನ್ನು ವಂಚಿಸಲಾಗಿದ್ದು, ಇದೀಗ ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕು ರಾಮಾನುಪಾಡಿ ಗ್ರಾಮದ ಗೋದಾವರಿ ಫಾರಂ ಹೌಸ್ ಮಾಲೀಕ ಪಿ.ವಿ. ರವೀಂದ್ರ ವಂಚನೆಗೊಳಗಾದವರಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ಶೆನವ ಕುರುನಾಡು ಗ್ರಾಮದ ಶ್ರೀನಿವಾಸ ಗೌಡ ವಿರುದ್ಧ ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶ್ರೀನಿವಾಸ ಗೌಡ ಕತ್ತೆಗಳನ್ನು ಸಾಗಾಣಿಕೆ ಮಾಡಿರುವ ಬಗೆ ಟಿವಿಯಲ್ಲಿ ವೀಕ್ಷಿಸಿದ್ದ ರವೀಂದ್ರ, ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಿದ್ದು ಗೋದಾವರಿ ಫಾರಂ ಹೌಸ್ ಗೆ ಬಂದಿದ್ದ ಶ್ರೀನಿವಾಸಗೌಡ ಅಲ್ಲಿದ್ದ ಕತ್ತೆಗಳನ್ನು ನೋಡಿ ಇವು ಕಡಿಮೆ ಹಾಲು ಕೊಡುತ್ತಿವೆ. ರಾಜಸ್ಥಾನದ ತಲಾರಿ ತಳಿಯ ಕತ್ತೆಗಳನ್ನು ಕೊಡಿಸುತ್ತೇನೆ ಎಂದು ಹೇಳಿ ಮುಂಗಡವಾಗಿ 9.45 ಲಕ್ಷ ರೂಪಾಯಿಗಳನ್ನು ಪಡೆದಿದ್ದರು ಎನ್ನಲಾಗಿದೆ. ಆದರೆ ಈವರೆಗೂ ಕತ್ತೆಗಳನ್ನು ಕೊಡಿಸದ ಕಾರಣ ಈಗ ದೂರು ದಾಖಲಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular