HomeLatest NewsBIG NEWS: ಹೂಡಿಕೆದಾರರಿಗೆ 23 ಕೋಟಿ ವಂಚನೆ: ದಂಪತಿ ಅರೆಸ್ಟ್

BIG NEWS: ಹೂಡಿಕೆದಾರರಿಗೆ 23 ಕೋಟಿ ವಂಚನೆ: ದಂಪತಿ ಅರೆಸ್ಟ್

ಹುಬ್ಬಳ್ಳಿ: ಹೂಡಿಕೆದಾರರಿಗೆ 23 ಕೋಟಿ ವಂಚನೆ ಮಾಡಿ ಪರಾರಿಯಾಗಿದ್ದ ದಂಪತಿಯನ್ನು ಹುಬ್ಬಳ್ಳಿ-ಧಾರವಾಡ ಬೈಪಾಸ್ ಮಾರ್ಗದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಸತೀಶ್ ವುಪ್ಪಲಪಾಟಿ ಹಾಗೂ ಪತ್ನಿ ಶಿಲ್ಪಾ ಬಂಡಾ ಬಂಧಿತ ದಂಪತಿಗಳು. ಆರೋಪಿಗಳಿಬ್ಬರೂ ಹೈದರಾಬಾದ್ ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದರು. ಹುಬ್ಬಳ್ಳಿ-ಧಾರಾವಾಡ ಬೈಪಾಸ್ ಮಾರ್ಗವಾಗಿ ಕಾರಿನಲ್ಲಿ ಹೋಗುತ್ತಿದ್ದ ದಂಪತಿಯನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.

ಇಬ್ಬರನ್ನೂ ಹೈದರಾಬಾದ್ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ದಂಪತಿ ಹೈದರಾಬಾದ್ ಮೂಲದವರಾಗಿದ್ದು, ಹೈದರಾಬಾದ್ ಸೆಂಟ್ರಲ್ ಕ್ರೈಂ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular