HomeLatest Newsನಕಲಿ ಬ್ಯಾಂಕ್ ಖಾತೆ ತೆರೆದು ವಂಚನೆ: ಮೂವರು ಆರೋಪಿಗಳು ಅರೆಸ್ಟ್

ನಕಲಿ ಬ್ಯಾಂಕ್ ಖಾತೆ ತೆರೆದು ವಂಚನೆ: ಮೂವರು ಆರೋಪಿಗಳು ಅರೆಸ್ಟ್

ಬೆಳಗಾವಿ: ನಕಲಿ ಕಂಪನಿ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು ಕೋಟ್ಯಂತರ ರೂಪಾಯಿ ವಂಚಿಸಿದ ಸೈಬರ್ ವಂಚಕರನ್ನು ಚೆನ್ನೈ ಪೊಲೀಸರು ಬೆಳಗಾವಿಯಲ್ಲಿ ಬಂಧಿಸಿದ್ದಾರೆ.

ಚೆನ್ನೈ ಪೊಲೀಸರು ಬೆಳಗಾವಿಗೆ ಆಗಮಿಸಿ ಬೆಳಗಾವಿಯ ಕುವೆಂಪು ನಗರದ ಅನಿಲ್ ಕೊಲ್ಲಾಪುರ, ಗನೇಶಪುರದ ರೋಹನ್ ಕಾಂಬಳೆ, ಆರ್ ಟಿಒ ಸರ್ಕಲ್ ನ ಸರ್ವೇಶ್ ಕಿವಿ ಎಂಬುವವರನ್ನು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಳಗಾವಿಯ ಜೆ ಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಚೆನ್ನೈ ಪೊಲೀಸರು ಮೂವರನ್ನೂ ವಶಕ್ಕೆ ಪಡೆದಿದ್ದಾರೆ. ಈ ಆರೋಪಿಗಳ ಬಂಧನದ ಮೂಲಕ 27 ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ತಮಿಳುನಾಡು ಅಪರಾಧ ವಿಭಾಗದ ಎಡಿಜಿಪಿ ಅವರಿಂದ ನಮಗೆ ಪತ್ರ ಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿ ಸಿಇಎನ್ ಪೊಲೀಸರು ಚೆನ್ನೈ ಪೊಲೀಸರಿಗೆ ಸಹಕಾರ ನೀಡಿದ್ದಾರೆ ಬೆಳಗಾವಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ ಗುಲಾಬರಾವ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular