HomeKarnatakaಮುಡಾ ಮಾಜಿ ಆಯುಕ್ತ ದಿನೇಶ ನಾಪತ್ತೆ ಬೆನ್ನಲ್ಲೇ ಮಾಜಿ ಆಯುಕ್ತರ ನಿವಾಸದಲ್ಲಿನ ಸಿಸಿಟಿವಿ, ಡಿವಿಆರ್ ಕೂಡ...

ಮುಡಾ ಮಾಜಿ ಆಯುಕ್ತ ದಿನೇಶ ನಾಪತ್ತೆ ಬೆನ್ನಲ್ಲೇ ಮಾಜಿ ಆಯುಕ್ತರ ನಿವಾಸದಲ್ಲಿನ ಸಿಸಿಟಿವಿ, ಡಿವಿಆರ್ ಕೂಡ ನಾಪತ್ತೆ; ದೂರು ದಾಖಲು

ಮೈಸೂರು: ಇಡಿ ಅಧಿಕಾರಿಗಳ ದಾಳಿ ಬೆನ್ನಲ್ಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮೂಡಾ ಮಾಜಿ ಆಯುಕ್ತ ದಿನೇಶ್ ನಾಪತ್ತೆಯಾಗಿದ್ದಾರೆ. ಇದರ ಬೆನ್ನಲ್ಲೇ ಮೂಡಾ ಆಯುಕ್ತರ ನಿವಾಸದಲ್ಲಿರುವ ಸಿಸಿಟಿವಿ ಕ್ಯಾಮರಾ, ಡಿವಿಆರ್ ಕೂಡ ನಾಪತ್ತೆಯಾಗಿದ್ದು, ಮುಡಾ ಅಧಿಕಾರಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮುಡಾ ಆಯುಕ್ತರ ನಿವಾಸದಲ್ಲಿರುವ ಸಿಸಿ ಟಿವಿ ಕ್ಯಾಮರಾ, ಡಿವಿಆರ್ ನಾಪತ್ತೆ ಬಗ್ಗೆ ಮುಡಾ ಇಂಜಿನಿಯರ್ ಗಳು ಮೈಸೂರು ಕುವೆಂಪು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ನೀಡಿದರೂ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡಿಲ್ಲ.

ಮೂಡಾ ಆಯುಕ್ತರ ಅಧಿಕೃತ ನಿವಾಸದಲ್ಲಿ 5 ಸಿಸಿಟಿವಿ ಕ್ಯಾಮರಾ ಡಿವಿ ಆರ್ ಇತ್ತು. ಆದರೆ ಅವುಗಳಲ್ಲಿ 3 ಸಿಸಿಟಿವಿ ಕ್ಯಾಮರಾ ನಾಪತ್ತೆಯಾಗಿದೆ. ಆಯುಕ್ತರ ನಿವಾಸದಲ್ಲಿಯೇ ಅಕ್ರಮ ನಡೆಯುತ್ತಿರುವ ಬಗ್ಗೆ ಆರೋಪ ಕೂಡ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಮಾಜಿ ಆಯುಕ್ತ ದಿನೇಶ್ ನಾಪತ್ತೆ ಹಾಗೂ ಸಿಸಿಟಿವಿ ಕ್ಯಾಮರಾಗಳು ನಾಪತ್ತೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular