ಬೆಂಗಳೂರು : ‘ಬಮೂಲ್’ ನೂತನ ಅಧ್ಯಕ್ಷರಾಗಿ ಮಾಜಿ ಸಂಸದ ಡಿ.ಕೆ ಸುರೇಶ್ ( D.K Suresh ) ಆಯ್ಕೆ ಆಗಿದ್ದಾರೆ.
ಬೆಂಗಳೂರು ಡೇರಿ ವೃತ್ತದಲ್ಲಿರುವ ಕಚೇರಿಯಲ್ಲಿ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಸಿದ್ದು, ನಂತರ ನೂತನ ಅಧ್ಯಕ್ಷರಾಗಿ ಮಾಜಿ ಸಂಸದ ಡಿ.ಕೆ ಸುರೇಶ್ ಆಯ್ಕೆ ಆಗಿದ್ದಾರೆ.
ಒಕ್ಕೂಟದ ಸದಸ್ಯರು ಹಾಗೂ ಚುನಾಯಿತರು ಅವರನ್ನು ಬಮೂಲ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು. ಬಮೂಲ್ ಕಚೇರಿ ಬಳಿ ಡಿಕೆ ಸುರೇಶ್ ಗೆ ಹೂವಿನ ಹಾರ ಹಾಕಿ, ಸಿಹಿ ಹಂಚಿ D.K ಸುರೇಶ್ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದಾರೆ.
ಧನ್ಯವಾದಗಳು! ಇಂದು ಬಮೂಲ್ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ. ಇದಕ್ಕೆ ಕಾರಣೀಭೂತರಾದ ಸರ್ವರಿಗೂ ಧನ್ಯವಾದಗಳು. ಇದು ರೈತರಿಗೆ ಸಂದ ವಿಜಯ. ಸಹಕಾರಿ ಕ್ಷೇತ್ರದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಹಲವಾರು ಕಾರ್ಯಗಳನ್ನು ಮುಂದೆಯೂ ಮಾಡಲಿದ್ದೇನೆ. ಈ ಹೊಸ ಜವಾಬ್ದಾರಿ ಹಾಗೂ ಪಯಣಕ್ಕೆ ಎಲ್ಲರ ಸಹಕಾರವಿರಲಿ ಎಂದು ಟ್ವೀಟ್ ಮಾಡಿದ್ದಾರೆ.
.

