ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಸ್ನೇಹಿತರಿಂದಲೇ ಬಿಗ್ ಶಾಕ್: ಕಾಶ್ಮೀರವನ್ನು ಮರೆತು ಭಾರತದೊಂದಿಗೆ ಸ್ನೇಹ ಬೆಳೆಸಿಕೊಳ್ಳಿ ಎಂದು ಸೌದಿ, ಯುಎಇ ತಾಕೀತು

ಕಾಶ್ಮೀರವನ್ನು ಮರೆತುಬಿಡಿ, ಭಾರತದೊಂದಿಗೆ ಸ್ನೇಹ ಬೆಳೆಸಿಕೊಳ್ಳಿ ಎಂದು ಪಾಕಿಸ್ತಾನಕ್ಕೆ ಸೌದಿ-ಯುಎಇ ನೇರವಾಗಿ ಹೇಳಿವೆ

ಒಂದು ಕಾಲದಲ್ಲಿ ತಮ್ಮ ನಿಜವಾದ ಸ್ನೇಹಿತರಾಗಿದ್ದ ಮುಸ್ಲಿಂ ರಾಷ್ಟ್ರಗಳು ಕೂಡ ಆರ್ಥಿಕ ವಿಪತ್ತಿನ ಅಂಚಿನಲ್ಲಿ ನಿಂತಿರುವ ಪಾಕಿಸ್ತಾನವನ್ನು ಬಿಡಲು ಪ್ರಾರಂಭಿಸಿವೆ. ಮುಸ್ಲಿಂ ರಾಷ್ಟ್ರಗಳಲ್ಲಿ ಎರಡು ದೊಡ್ಡ ರಾಷ್ಟ್ರಗಳು ಕಾಶ್ಮೀರವನ್ನು ಮರೆತು ಭಾರತದೊಂದಿಗೆ ಸ್ನೇಹ ಬೆಳೆಸುವಂತೆ ಪಾಕಿಸ್ತಾನಕ್ಕೆ ಸ್ಪಷ್ಟವಾಗಿ ಹೇಳಿವೆ.

ಪಾಕಿಸ್ತಾನದ ಗೆಳೆಯರಾದ ಸೌದಿ ಅರೇಬಿಯಾ ಮತ್ತು ಯುಎಇ ಕಾಶ್ಮೀರವನ್ನು ಮರೆತುಬಿಡಿ ಎಂದು ಪಾಕಿಸ್ತಾನಕ್ಕೆ ನೇರವಾಗಿ ಹೇಳಿದ್ದಾರೆ. ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಕಾಶ್ಮೀರದಿಂದ ಆರ್ಟಿಕಲ್ 370 ರದ್ದತಿ ಬಗ್ಗೆ ಆರೋಪಗಳ ಬಗ್ಗೆ ಶಹಬಾಜ್ ಸರ್ಕಾರ ಮೌನವಾಗಿರಬೇಕು ಎಂದು ಪಾಕಿಸ್ತಾನಕ್ಕೆ ತಿಳಿಸಿವೆ.

ಪಾಕಿಸ್ತಾನಿ ಪತ್ರಿಕೆಯ ವರದಿಯ ಪ್ರಕಾರ, ಪಾಕಿಸ್ತಾನವು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಇಸ್ಲಾಮಿಕ್ ದೇಶಗಳ ಸಂಘಟನೆಯಲ್ಲಿ(OIC) ಇಲ್ಲಿಯವರೆಗೆ ಕೂಗು ಹಾಕುತ್ತಿದೆ. ಈ OIC ಯ ಅತ್ಯಂತ ಶಕ್ತಿಶಾಲಿ ದೇಶ ಸೌದಿ ಅರೇಬಿಯಾ. ಸೌದಿ ಅರೇಬಿಯಾ ಕೂಡ ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡುವುದಿಲ್ಲ ಎಂದು ಪಾಕಿಸ್ತಾನಕ್ಕೆ ಸ್ಪಷ್ಟವಾಗಿ ಹೇಳಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read