ಎರಡು ಸರೀಸೃಪಗಳ ನಡುವಿನ ಭೀಕರ ಕಾದಾಟದ ವೀಡಿಯೊ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ. ಇದು ಮೊಸಳೆಯೇ, ಭಯಾನಕ ಹಲ್ಲಿಗಳೋ ಎಂಬ ಬಗ್ಗೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಕುತೂಹಲವೆಂದರೆ ಇವು ನಿಂತುಕೊಂಡೇ ಕಾದಾಟ ಮಾಡುತ್ತಿವೆ.
ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಶಾಂತ ನಂದಾ ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಐಐಎಂ ಕೋಲ್ಕತಾ ಕ್ಯಾಂಪಸ್‌ನಲ್ಲಿ ಎರಡು ಸರೀಸೃಪಗಳು ಪರಸ್ಪರ ಕಾದಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಇದನ್ನು ನೋಡಿದರೆ ಭಯ ಬೀಳುವಂತಿದೆ. ಈ ಸರೀಸೃಪಗಳು ಕಾದಾಟ ಮಾಡುತ್ತಿರುವ ಸಂದರ್ಭದಲ್ಲಿ ವಿಡಿಯೋ ತೆಗೆದವರಿಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಟ್ವಿಟರ್‌ನಲ್ಲಿ ಈ ವೀಡಿಯೊ 8 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 613 ಲೈಕ್‌ಗಳನ್ನು ಸಂಗ್ರಹಿಸಿದೆ. ಸರೀಸೃಪಗಳು ಮೊಸಳೆಯೇ ಅಥವಾ ಮಾನಿಟರ್ ಹಲ್ಲಿಗಳೇ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಗೊಂದಲಕ್ಕೊಳಗಾಗಿದ್ದರು.
https://twitter.com/susantananda3/status/1630805712027676672?ref_src=twsrc%5Etfw%7Ctwcamp%5Etweetembed%7Ctwterm%5E1630805712027676672%7Ctwgr%5E11e514523f043fb6a9bdad73fef05c3e23922ce4%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fforest-officer-shares-video-of-two-reptiles-fighting-while-standing-up-3824385