HomeEntertainment'ಫಾರ್ ರಿಜಿಸ್ಟ್ರೇಷನ್' ಚಿತ್ರದ ಟ್ರೈಲರ್ ರಿಲೀಸ್

‘ಫಾರ್ ರಿಜಿಸ್ಟ್ರೇಷನ್’ ಚಿತ್ರದ ಟ್ರೈಲರ್ ರಿಲೀಸ್

ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಫಾರ್ ರಿಜಿಸ್ಟ್ರೇಷನ್’ ಚಿತ್ರದ ಟ್ರೈಲರ್ ಇಂದು ಜನ್ಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಟ್ರೈಲರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ನೋಡುಗರ ಗಮನ ಸೆಳೆದಿದೆ.

ಈ ಚಿತ್ರವನ್ನು ನವೀನ್ ದ್ವಾರಕನಾಥ್ ನಿರ್ದೇಶಿಸಿದ್ದು, ಪೃಥ್ವಿ ಅಂಬಾರ್ ಮತ್ತು ಮಿಲನ ನಾಗರಾಜ್ ಸೇರಿದಂತೆ ರವಿಶಂಕರ್, ತಬಲ ನಾಣಿ, ಸುಧಾ ಬೆಳವಾಡಿ, ಬಾಬು ಈರಣ್ಣಯ್ಯ, ಸ್ವಾತಿ, ರಮೇಶ್ ಭಟ್, ಸಿಹಿ ಕಹಿ ಚಂದ್ರು, ಅರವಿಂದ್, ಬ್ಯಾಂಕ್ ಜನಾರ್ದನ್, ತೆರೆ ಹಂಚಿಕೊಂಡಿದ್ದಾರೆ. ನಿಶ್ಚಲ್ ಫಿಲಂಸ್ ಬ್ಯಾನರ್ ನಡಿ ನವೀನ್ ರಾವ್ ನಿರ್ಮಾಣ ಮಾಡಿದ್ದಾರೆ. ಮನು ಸಂಕಲನ ಮತ್ತು ಅಭಿಲಾಶ್ ಕಲ್ಲತ್ತಿ ಹಾಗೂ ಅಭಿಷೇಕ್ ಕಾಸರಗೋಡು ಛಾಯಾಗ್ರಹಣವಿದೆ. ಆರ್ ಕೆ ಹರೀಶ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular