HomeKarnatakaSHOCKING NEWS: ನಾಪತ್ತೆಯಾಗಿದ್ದ ಫುಟ್ಬಾಲ್ ಆಟಗಾರ ಶವವಾಗಿ ಪತ್ತೆ

SHOCKING NEWS: ನಾಪತ್ತೆಯಾಗಿದ್ದ ಫುಟ್ಬಾಲ್ ಆಟಗಾರ ಶವವಾಗಿ ಪತ್ತೆ

ಧಾರವಾಡ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನೊಬ್ಬ ಶವವಾಗಿ ಪತ್ತೆಯಾಗಿರುವ ಘಟನೆ ಧಾರವಾಡ ಜಿಲ್ಲೆಯ ಸಾದನಕೇರಿ ಬಡಾವಣೆಯಲ್ಲಿ ನಡೆದಿದೆ.

23 ವರ್ಷದ ಚೇತನ್ ಕೊಂಡಿಹಾಳ ಮೃತ ಯುವಕ. ಚೇತನ್ ಕೊಂಡಿಕಾಳ ಫುಟ್ಬಾಲ್ ಆಟಗಾರನಾಗಿದ್ದ. ಆಟದ ಕಡೆಗೆ ಆಸಕ್ತಿ ಕಡಿಮೆ ಮಾಡಿ ಓದಿನ ಕಡೆಗೆ ಗಮನಹರಿಸು ಎಂದು ಚೇತನ್ ತಂದೆ ಬುದ್ಧಿವಾದ ಹೇಳಿದ್ದರಂತೆ. ತಂದೆ ಮಾತಿನಿಂದ ಮನನೊಂದು ಎರಡು ದಿನಗಳಿಂದ ನಾಪತ್ತೆಯಾಗಿದ್ದ.

ಇದೀಗ ಧಾರವಾಡ ನಗರದ ಕೆಲಗೇರಿ ಕೆರೆಯಲ್ಲಿ ಯುವಕನ ಶವ ಪತ್ತೆಯಾಗಿದೆ. ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚೇತನ್ ಗೆ ಫುಟ್ಬಾಲ್ ಬಗ್ಗೆ ತೀವ್ರವಾದ ಆಸಕ್ತಿ ಇತ್ತು. ಮಗನಿಗೆ ಓದಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ತಂದೆ ಶರಣಪ್ಪ ಕೊಂಡಿಹಾಳ ಓದಿನ ಬಗ್ಗೆ ಗಮನಕೊಡು ಎಂದು ಬುದ್ಧಿ ಹೇಳಿದ್ದಾರೆ. ಇಷ್ಟಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಧಾರವಾಡದ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular