HomeHealthಲಿವರ್ ʼಆರೋಗ್ಯʼ ಕಾಪಾಡುವ ಆಹಾರಗಳಿವು

ಲಿವರ್ ʼಆರೋಗ್ಯʼ ಕಾಪಾಡುವ ಆಹಾರಗಳಿವು

ಲಿವರ್‌ ಹಲವಾರು ರೀತಿಯ ಕಾರ್ಯಗಳನ್ನು ನಿರ್ವಹಿಸುತ್ತದೆ. ಪ್ರೋಟೀನ್‌, ಕೊಲೆಸ್ಟ್ರಾಲ್‌ ಮತ್ತು ಪಿತ್ತರಸ ಬಿಡುಗಡೆ, ವಿಟಮಿನ್‌, ಖನಿಜಾಂಶ ಮತ್ತು ಕಾರ್ಬೋಹೈಡ್ರೇಟ್ಸ್‌ ಶೇಖರಣೆ ಇದರ ಪ್ರಮುಖ ಕಾರ್ಯವಾಗಿದೆ. ಇದರ ಆರೋಗ್ಯ ಕೂಡ ಅಷ್ಟೇ ಮುಖ್ಯ. ಲಿವರ್‌ನ ಆರೋಗ್ಯ ಕಾಪಾಡುವಲ್ಲಿ ಈ ಆಹಾರಗಳು ಪ್ರಮುಖ ಪಾತ್ರ ವಹಿಸುತ್ತವೆ.

* ಬೆಳ್ಳುಳ್ಳಿಯಲ್ಲಿ ಸೆಲೆನಿಯಂ ಎನ್ನುವ ಅಂಶವಿದ್ದು, ಲಿವರ್‌ ನ ಆರೋಗ್ಯಕ್ಕೆ ಒಳ್ಳೆಯದು. ಬೆಳ್ಳುಳ್ಳಿಯಲ್ಲಿ ಅರ್ಜಿನೈನ್‌ ಎಂಬ ಅಮಿನೋ ಆಮ್ಲವಿದ್ದು, ಇದು ರಕ್ತನಾಳಗಳಿಗೆ ಆರಾಮ ನೀಡಿ ಲಿವರ್‌ನ ರಕ್ತದೊತ್ತಡ ಕಡಿಮೆ ಮಾಡುತ್ತದೆ.

* ಆಲಿವ್‌ ಆಯಿಲ್‌ ಅನ್ನು ಮಿತವಾಗಿ ಸೇವಿದರೆ ಲಿವರ್‌ಗೆ ಒಳ್ಳೆಯದು. ದೇಹದಲ್ಲಿನ ವಿಷ ಹೀರುವಂತಹ ಲಿಪಿಡ್‌ ಬೇಸ್‌ ಇದರಲ್ಲಿದೆ. ಇದು ಲಿವರ್‌ನ ಕಾರ್ಯನಿರ್ವಹಣೆಗೆ ನೆರವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಬಸಳೆ, ಬೀಟ್‌ ರೂಟ್‌, ಬ್ರೊಕೋಲಿ, ಹೂಕೋಸು ಮತ್ತು ಬ್ರಸಲ್ಸ್‌ ಮೊಗ್ಗುಗಳು ತುಂಬಾ ಒಳ್ಳೆಯದು.

* ಗ್ರೀನ್‌ ಟೀಯಲ್ಲಿ ಫ್ಲೆವನಾಯ್ಡ್‌ ಸಾವಯವ ಗುಂಪಿಗೆ ಸೇರಿದ ಆ್ಯಂಟಿಆಕ್ಸಿಡೆಂಟ್‌ ಇದೆ. ಇದು ದೇಹವನ್ನು ವಿವಿಧ ಬಗೆಯ ಕ್ಯಾನ್ಸರ್‌ನಿಂದ ತಡೆದು, ಲಿವರ್‌ನ ಆರೋಗ್ಯ ಕಾಪಾಡುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular