ಬೆಂಗಳೂರು: ಬೆಂಗಳೂರಿನ ಆಹಾರ ಪೂರೈಕೆ ಗೋದಾಮಿನ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಬೊಮ್ಮನ ಹಳ್ಲಿಯಲ್ಲಿರುವ ಫುಡ್ ಸಪ್ಲೈ ಗೋದಾಮಿನ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಂದು ಬೆಳಿಗ್ಗೆಯೇ ಗೋದಾಮಿನ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಆಹಾರ ಸುರಕ್ಷತೆ, ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಗೋದಾಮಿನ ಸಿಬ್ಬಂದಿಗಳಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ.
ನಿನ್ನೆ ಬೆಂಗಳೂರು ಸೇರಿದಂತೆ ರಾಜ್ಯದ 25ಕ್ಕೂ ಹೆಚ್ಚು ಫೈವ್ ಸ್ಟಾರ್ ಹೋಟೆಲ್ ಗಳ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಹೋಟೆಲ್ ನ ಕಿಚ್ನ್, ಸ್ಟೋ ರೂಮ್ ಗಳನ್ನು ಪರಿಶೀಲಿಸಿದ್ದರು. ಬೆಂಗಳೂರಿನ ಲಲಿತ್ ಅಶೋಕ್, ಶಾಂಗ್ರಿಲ್ಲಾ ಹೋಟೆಲ್ ಗಳ ಮೇಲೆ ದಾಳಿ ವೇಳೆ ಅವಧಿ ಮೀರಿದ 30 ಲೀಟರ್ ಹಾಲು, ಕೊಳೆತ ಈರುಳ್ಳಿ, ಹಾಳಾಗಿದ್ದ ಮಾಂಸ ಸೇರಿ ಹಲವು ಪತ್ತೆಯಾಗಿದ್ದವು. ಗುಣಮಟ್ಟದ ಆಹಾರವಿಲ್ಲದ, ಸ್ವಚ್ಛತೆ, ಸುರಕ್ಷತಾ ಕ್ರಮ ಅಳವಡಿಸದ ಹೋಟೆಲ್ ಗಳಿಗೆ ನೋಟಿಸ್ ನೀಡಿದ್ದರು.
ಇದರ ಬೆನ್ನಲ್ಲೇ ಇದೀಗ ಬೆಂಗಳೂರಿನ ಆಹಾರ ಪೂರೈಕೆ ಗೋದಾಮಿನ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆಹಾರ ಇಲಾಖೆ ಸಚಿವ ಯು.ಟಿ.ಖಾದರ್ ಸೂಚನೆ ಮೇರೆಗೆ ಈ ದಾಳಿ ನಡೆದಿದೆ.

