ಚಳಿಗಾಲದಲ್ಲಿ ಎದುರಾಗುವ ಸೌಂದರ್ಯ ಸಮಸ್ಯೆಗಳಿಂದ ಪಾರಾಗಲು ಇದನ್ನು ಅನುಸರಿಸಿ

ವಾತಾವರಣದಲ್ಲಿನ ಬದಲಾವಣೆ ಆರೋಗ್ಯ, ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ಕೆಲವೊಂದನ್ನು ಅನುಸರಿದರೆ ಈ ಸಮಸ್ಯೆಗಳಿಂದ ಪಾರಾಗಬಹುದು.

ಚಳಿಗಾಲದಲ್ಲಿ ಬೆಚ್ಚಗಿನ ಉಡುಪಿನಿಂದ ರಕ್ಷಣೆ ಪಡೆಯಿರಿ. ಚಳಿಗಾಲದಲ್ಲಿ ಸಾಮಾನ್ಯವಾಗಿ ಮೈ ಒಡೆಯುತ್ತದೆ. ಇದರಿಂದಾಗಿ ಉರಿ, ಕಡಿತವಾಗುತ್ತದೆ. ಚಳಿಗಾಲದಲ್ಲಿ ಚರ್ಮದ ಬಗ್ಗೆ ಕಾಳಜಿ ವಹಿಸಿರಿ. ಚರ್ಮದ ಕಾಂತಿಯನ್ನು ಹೆಚ್ಚಿಸುವ ಎಳ್ಳು, ಶೇಂಗಾ, ಒಣಕೊಬ್ಬರಿ ಬಳಸಿರಿ.

ಪುಷ್ಠಿಕರವಾದ ಆಹಾರ ಬಿಸಿಯಾದ ಅನ್ನ, ಹುಳಿ, ಖಾರ ಇವುಗಳಿಂದ ಕೂಡಿದ ಆಹಾರವನ್ನು ಸೇವಿಸಿ. ರಾತ್ರಿ ಬೇಗನೇ ಊಟ ಮಾಡಿರಿ. ಬೆಳಿಗ್ಗೆ ಉಪಹಾರ ಬೇಗನೆ ಸೇವಿಸಿರಿ. ಇದರೊಂದಿಗೆ ಶಕ್ತಿಯನ್ನು ಒದಗಿಸುವ ಹುಗ್ಗಿ, ಖಾರ ಪೊಂಗಲ್, ಸಿಹಿ ಪೊಂಗಲ್ ತರಕಾರಿಗಳಿಂದ ಅವುಗಳಲ್ಲಿ ಪ್ರಮುಖವಾಗಿ ಬೆಂಡೆಕಾಯಿ, ಸೌತೆಕಾಯಿ, ಹಾಗಲಕಾಯಿ ಇವುಗಳಿಂದ ತಯಾರಿಸಿದ ಗೊಜ್ಜು ಸೇವಿಸಬಹುದು.

ಎಳ್ಳಿನಿಂದ ತಯಾರಿಸಿದ ಪದಾರ್ಥ ಸೇವಿಸಬೇಕು. ಆಹಾರದಲ್ಲಿ ಹೊಸ ಅಕ್ಕಿ, ಗೋಧಿ, ಉದ್ದು ಉಪಯೋಗಿಸಬೇಕು. ಆಲೂಗಡ್ಡೆ, ಗೆಣಸು, ಅವರೆಕಾಯಿ, ತೊಗರಿಕಾಯಿ ಚಳಿಗಾಲದಲ್ಲಿ ಹೆಚ್ಚಾಗಿ ಬಳಸುವ ತರಕಾರಿಗಳಾಗಿವೆ. ಮಾತ್ರವಲ್ಲ, ಇವು ಶರೀರಕ್ಕೆ ಬಲವನ್ನು ನೀಡುತ್ತವೆ. ಮೊಸರಿನಿಂದ ತಯಾರಿಸಿದ ತಂಬುಳಿ, ಮಜ್ಜಿಗೆ ಹುಳಿ, ಮೊಸರುಬಜ್ಜಿ ಬಳಕೆ ಒಳ್ಳೆಯದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read