ಜೀವನದಲ್ಲಿ ಅದೃಷ್ಟ ಮತ್ತು ಯಶಸ್ಸನ್ನು ಗಳಿಸಲು ಸೋಮವಾರದಂದು ತಪ್ಪದೇ ಪಾಲಿಸಿ ಈ ಪರಿಹಾರ ಕ್ರಮ

ಜ್ಯೋತಿಷ್ಯಶಾಸ್ತ್ರದಲ್ಲಿ ಸೋಮವಾರಕ್ಕೆ ಹೆಚ್ಚಿನ ಮಹತ್ವವಿದೆ. ಈ ದಿನ ಶಿವ ಹಾಗೂ ಚಂದ್ರನಿಗೆ ಮೀಸಲಿಡಲಾಗಿದೆ. ಶಿವ ಬೇಡಿದನ್ನು ಕೊಡುವ ಭಕ್ತವತ್ಸಲನಾದರೆ, ಚಂದ್ರ ಮನಸ್ಸನ್ನು ನಿಯಂತ್ರಿಸುವವನಾಗಿದ್ದಾನೆ. ಹಾಗಾಗಿ ಕುಟುಂಬ ಸಂಬಂಧಗಳು ಹಾಗೂ ಮನಸ್ಸಿಗೆ ಸಂಬಂಧಿಸಿದ ವಿಷಯಗಳನ್ನು ಪರಿಹಾರಿಸಲು ಸೋಮವಾರ ಸೂಕ್ತ ದಿನವೆಂದು ಜ್ಯೋತಿಷಿಗಳು ಭಾವಿಸುತ್ತಾರೆ. ಇದಲ್ಲದೆ, ಹೊಸ ಕೆಲಸಗಳನ್ನು ಪ್ರಾರಂಭಿಸಲು ಮತ್ತು ವೈಯಕ್ತಿಕ ಅಭಿವೃದ್ಧಿಯತ್ತ ಹೆಜ್ಜೆ ಇಡಲು ಈ ದಿನ ಅನುಕೂಲಕರವೆಂದು ಪರಿಗಣಿಸಲಾಗಿದೆ. ಹಾಗಾಗಿ ಸೋಮವಾರ ಶಿವ ಮತ್ತು ಚಂದ್ರನನ್ನು ಸಂತೋಷಪಡಿಸಬೇಕು ಆಗ ಮಾತ್ರ ನೀವು ಜೀವನದಲ್ಲಿ ಯಶಸ್ಸನ್ನು ಪಡೆಯುವಂತಹ ಕೆಲಸ ಮಾಡಬಹುದು ಎಂದು ಪಂಡಿತರು ಹೇಳುತ್ತಾರೆ. ಅದಕ್ಕಾಗಿ ಸೋಮವಾರ ಈ ಪರಿಹಾರಗಳನ್ನು ಮಾಡಿ.

ಬಿಳಿ ಬಟ್ಟೆಗಳನ್ನು ಧರಿಸಿ : ಚಂದ್ರನನ್ನು ಪ್ರಸನ್ನಗೊಳಿಸಲು ಸೋಮವಾರದಂದು ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿ. ಬಿಳಿ ಬಣ್ಣವು ಚಂದ್ರನ ಸಂಕೇತವಾಗಿದೆ ಮತ್ತು ಶಾಂತಿಯ ಸಂಕೇತವಾಗಿದೆ. ಹಾಗಾಗಿ ಬಿಳಿ ಬಣ್ಣದ ಬಟ್ಟೆಯನ್ನು ಧರಿಸುವುದರಿಂದ ಚಂದ್ರನ ಅನುಗ್ರಹದಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಇದು ನಿಮ್ಮನ್ನು ಅಭಿವೃದ್ದಿಯತ್ತ ಕೊಂಡೊಯ್ಯುತ್ತದೆ.

ಚಂದ್ರ ಮಂತ್ರವನ್ನು ಪಠಿಸಿ : ಮನಸ್ಸಿಗೆ ನೆಮ್ಮದಿ ದೊರಕಲು ಚಂದ್ರನನ್ನು ಪ್ರಸನ್ನಗೊಳಿಸಿ. ಅದಕ್ಕಾಗಿ ಸೋಮವಾರದಂದು ಚಂದ್ರನಿಗೆ ಹಾಲನ್ನು ಅರ್ಪಿಸುತ್ತಾ “ಓಂ ಚಂದ್ರಾಯ ನಮಃ” ಎಂಬ ಪವಿತ್ರ ಮಂತ್ರವನ್ನು ಪಠಿಸಿ.

ಆಹಾರ ಮತ್ತು ಹಾಲನ್ನು ದಾನ ಮಾಡಿ : ಸೋಮವಾರದ ದಿನ ಬಿಳಿ ಬಣ್ಣದ ವಸ್ತುಗಳಾದ ಹಾಲು, ಅಕ್ಕಿಯನ್ನು ಬಡವರಿಗೆ ಅಥವಾ ನಿರ್ಗತಿಕರಿಗೆ ದಾನ ಮಾಡಿ. ಇದರಿಂದ ಚಂದ್ರನ ಅನುಗ್ರಹ ದೊರೆತು ಜೀವನದಲ್ಲಿ ಏಳಿಗೆ ಕಾಣುತ್ತೀರಿ.

ಮುತ್ತು ಧರಿಸಿ : ಸೋಮವಾರದಂದು ನೀವು ಮುತ್ತುಗಳಿಂದ ತಯಾರಿಸಿದ ಆಭರಣಗಳನ್ನು ಧರಿಸಿ. ಇದು ಚಂದ್ರದೇವನನ್ನು ನಿಮ್ಮತ್ತ ಆಕರ್ಷಿಸುತ್ತದೆ, ಇದರಿಂದ ನಿಮ್ಮ ಮನಸ್ಸಿನ ಇಚ್ಛೆ ಈಡೇರುತ್ತದೆ.

ಶಿವಲಿಂಗಕ್ಕೆ ನೀರನ್ನು ಅರ್ಪಿಸಿ : ಸೋಮವಾರದಂದು ಶಿವನ ಪೂಜೆ ಮಾಡಲಾಗುತ್ತದೆ. ಶಿವನು ಚಂದ್ರನನ್ನು ತಲೆಯಲ್ಲಿ ಧರಿಸಿದ ಕಾರಣ ನೀವು ಚಂದ್ರ ದೇವನ ಅನುಗ್ರಹ ಪಡೆಯಲು ಸೋಮವಾರ ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡಿ. ಇದರಿಂದ ಚಂದ್ರದೇವ ಪ್ರಸನ್ನನಾಗುತ್ತಾನೆ. ಮತ್ತು ನೀವು ಜೀವನದಲ್ಲಿ ನೆಮ್ಮದಿ ಕಂಡುಕೊಂಡು ಪ್ರಗತಿಯತ್ತ ಸಾಗುತ್ತೀರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read