ಪಾತ್ರೆಗಳ ಸುಟ್ಟ ಕಲೆಗಳನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ

ಕೆಲವೊಮ್ಮೆ ಅಡುಗೆ ಮಾಡುವಾಗ ಪಾತ್ರೆ ತಳ ಹಿಡಿಯುತ್ತವೆ, ಸೀದು ಹೋದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಕಷ್ಟದ ಕೆಲಸ. ಇದನ್ನು ಸರಿಯಾಗಿ ಕ್ಲೀನ್ ಮಾಡದಿದ್ದರೆ ಅದರಿಂದ ತಯಾರಿಸಿದ ಅಡುಗೆ ರುಚಿಕರವಾಗಿರುವುದಿಲ್ಲ. ಹಾಗಾಗಿ ಈ ಸುಟ್ಟ  ಪಾತ್ರೆಗಳನ್ನು ಕ್ಲೀನ್ ಮಾಡಲು ಈ ವಿಧಾನಗಳನ್ನು ಅನುಸರಿಸಿ.

*ಸುಟ್ಟ ಪಾತ್ರೆಗಳನ್ನು ಸ್ವಚ್ಚಗೊಳಿಸಲು ಉಪ್ಪನ್ನು ಬಳಸಿ. ಸ್ವಲ್ಪ ಉಪ್ಪನ್ನು ತೆಗೆದುಕೊಂಡು ಪಾತ್ರೆಯ ಮೇಲೆ ಸ್ಕ್ರಬ್ ಮಾಡಿ. ಇದರಿಂದ ಕಲೆ ಸುಲಭವಾಗಿ ನಿವಾರಣೆಯಾಗುತ್ತದೆ.

*ಅಡುಗೆ ಸೋಡಾದ ಪೇಸ್ಟ್ ಗಳನ್ನು ಸುಟ್ಟ ಪಾತ್ರೆಗೆ ಹಾಕಿ 15 ನಿಮಿಷ ನೆನೆಸಿಡಿ. ಬಳಿಕ ಅದನ್ನು ಸೋಪ್ ಬಳಸಿ ತೊಳೆಯಿರಿ.

*ಟೊಮೆಟೊ ಸಾಸ್ ನ್ನು ಸುಟ್ಟ ಪಾತ್ರೆಗಳ ಮೇಲೆ ಹಚ್ಚಿ ರಾತ್ರಿಯಿಡಿ ಇಟ್ಟು ಬೆಳಿಗ್ಗೆ ಸ್ಕ್ರಬ್ ಬಳಸಿ ವಾಶ್ ಮಾಡಿ.

*ಸುಟ್ಟ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಸಿಟ್ರಸ್ ಅಂಶ ಸಹಕಾರಿಯಾಗಿದೆ. ಹಾಗಾಗಿ ನಿಂಬೆ ಹಣ್ಣನ್ನು ಬಳಸಿ ಪಾತ್ರೆಗಳ ಮೇಲೆ ಸ್ಕ್ರಬ್ ಮಾಡಿ . ಇದರಿಂದ ಕಲೆಗಳು ಬೇಗನೆ ನಿವಾರಣೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read