ವಿಐಪಿ ವಾಹನಗಳಲ್ಲಿ ಸೈರನ್ ಬದಲು ಮೊಳಗಲಿದೆ ಕೊಳಲ ವಾದನ; ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿ

ಯೂಟ್ಯೂಬ್ ನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ತಿಂಗಳಿಗೆ 4 ಲಕ್ಷ ರೂ ಪಾವತಿ!- Kannada Prabha

ಪ್ರಸ್ತುತ ವಿಐಪಿ ವಾಹನಗಳು ರಸ್ತೆಯಲ್ಲಿ ಸಂಚರಿಸುವ ವೇಳೆ ಸೈರನ್ ಹಾಕಲಾಗುತ್ತಿದ್ದು, ಇನ್ನು ಮುಂದೆ ಇದಕ್ಕೆ ಮುಕ್ತಿ ದೊರೆಯಲಿದೆ. ಶಬ್ದ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕ್ರಮ ಕೈಗೊಳ್ಳಲು ಮುಂದಾಗಿದೆ.

ಪುಣೆಯ ಚಾಂದಿನಿ ಚೌಕ್ ಮೇಲ್ಸೇತುವೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಶಬ್ದ ಮಾಲಿನ್ಯ ನಿಯಂತ್ರಿಸುವುದು ಅತ್ಯವಶ್ಯಕವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕರ್ಕಶ ಶಬ್ದದ ಹಾರ್ನ್, ಸೈರನ್ ಬದಲು ವಿಐಪಿ ವಾಹನಗಳಿಗೆ ಭಾರತೀಯ ವಾದ್ಯಗಳ ಸಂಗೀತವನ್ನು ಜೋಡಿಸಲು ಚಿಂತನೆ ನಡೆಸಲಾಗಿದ್ದು, ಹೀಗಾಗಿ ಕೊಳಲು, ತಬಲಾ ಮತ್ತು ಶಂಖನಾದಕ್ಕೆ ಬದಲಿಸುವ ಕುರಿತಂತೆ ನೀತಿ ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read