HomeInternationalಇಂಜಿನ್ ಫೇಲ್ ; ಸಮುದ್ರದಲ್ಲಿ ವಿಮಾನ ಇಳಿಸಿ ಸಮಯಪ್ರಜ್ಞೆ ತೋರಿದ ಪೈಲಟ್, ವೀಡಿಯೋ ವೈರಲ್ |WATCH...

ಇಂಜಿನ್ ಫೇಲ್ ; ಸಮುದ್ರದಲ್ಲಿ ವಿಮಾನ ಇಳಿಸಿ ಸಮಯಪ್ರಜ್ಞೆ ತೋರಿದ ಪೈಲಟ್, ವೀಡಿಯೋ ವೈರಲ್ |WATCH VIDEO

ಅಮೆರಿಕದ ಫ್ಲೋರಿಡಾದಲ್ಲಿ 23 ವರ್ಷದ ಯುವ ಪೈಲಟ್‌ ತೋರಿದ ಸಮಯಪ್ರಜ್ಞೆ ಮತ್ತು ಧೈರ್ಯ ಎಲ್ಲರನ್ನೂ ಅಚ್ಚರಿಗೊಳಿಸಿದೆ. ವಿಮಾನದಲ್ಲಿ ಇಂಜಿನ್‌ ಸಮಸ್ಯೆ ಕಾಣಿಸಿಕೊಂಡು ಅದು ನಿಯಂತ್ರಣ ತಪ್ಪಿ ನೆಲಕ್ಕೆ ಅಪ್ಪಳಿಸುವ ಪರಿಸ್ಥಿತಿ ಎದುರಾದಾಗ, ಪರಿಸ್ಥಿತಿಯನ್ನು ಕ್ಷಣಾರ್ಧದಲ್ಲಿ ಅರ್ಥಮಾಡಿಕೊಂಡ ಪೈಲಟ್‌ ಜನನಿಬಿಡ ಪ್ರದೇಶವನ್ನು ತಪ್ಪಿಸಿ ವಿಮಾನವನ್ನು ಅಟ್ಲಾಂಟಿಕ್‌ ಮಹಾಸಾಗರದತ್ತ ತಿರುಗಿಸಿದ್ದಾರೆ. ಈ ಮೂಲಕ ತಮ್ಮ ಪ್ರಾಣದ ಜೊತೆಗೆ ಹಲವರ ಪ್ರಾಣವನ್ನೂ ಉಳಿಸಿದ್ದಾರೆ.

‘ನ್ಯೂಯಾರ್ಕ್‌ ಪೋಸ್ಟ್‌’ ವರದಿ ಪ್ರಕಾರ, 23 ವರ್ಷದ ಫೇಯ್ತ್ ಟೆನ್‌ಕ್ಲೇ ತಮ್ಮ ಕುಟುಂಬಕ್ಕೆ ಸೇರಿದ ಸಿಂಗಲ್‌-ಇಂಜಿನ್‌ ‘ಪೈಪರ್ PA-30’ ವಿಮಾನದಲ್ಲಿ ಫೋರ್ಟ್‌ ಮೇಯರ್ಸ್‌ನಿಂದ ಬಹಾಮಾಸ್‌ಗೆ ತೆರಳುತ್ತಿದ್ದರು. ಬಹಾಮಾಸ್‌ನಲ್ಲಿದ್ದ ತಮ್ಮ ಪೋಷಕರನ್ನು ಕರೆತರಲು ಅವರು ಪ್ರಯಾಣ ಆರಂಭಿಸಿದ್ದರು. ಆದರೆ ಮಾರ್ಗಮಧ್ಯೆಯೇ ವಿಮಾನದ ಇಂಜಿನ್‌ನಲ್ಲಿ ಏಕಾಏಕಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

ಬೀಚ್‌ ಕಡೆಗೆ ಬದಲಾಗಿ ಸಮುದ್ರದತ್ತ

ಇಂಜಿನ್‌ ಸಮಸ್ಯೆಯನ್ನು ಗುರುತಿಸಿದ ಫೇಯ್ತ್‌ ಕೂಡಲೇ ಎಚ್ಚೆತ್ತುಕೊಂಡಿದ್ದಾರೆ. ಫ್ಲೋರಿಡಾದ ಬೋಕಾ ರಾಟನ್‌ ಬೀಚ್‌ ಸಮೀಪ ವಿಮಾನವನ್ನು ತುರ್ತು ಲ್ಯಾಂಡಿಂಗ್‌ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಆ ಪ್ರದೇಶದಲ್ಲಿ ಹಲವು ಕಟ್ಟಡಗಳಿದ್ದವು. ಬೀಚ್‌ನಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇದ್ದರು. ವಿಮಾನ ನೆಲಕ್ಕೆ ಅಪ್ಪಳಿಸಿದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಯನ್ನು ಅರಿತ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಕಟ್ಟಡಗಳು ಹಾಗೂ ಬೀಚ್‌ನಲ್ಲಿದ್ದ ಜನರನ್ನು ತಪ್ಪಿಸಿ ವಿಮಾನವನ್ನು ಅಟ್ಲಾಂಟಿಕ್‌ ಮಹಾಸಾಗರದತ್ತ ತಿರುಗಿಸಿದ್ದಾರೆ.ಕೊನೆಗೆ ವಿಮಾನವನ್ನು ಸಮುದ್ರದಲ್ಲೇ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಕಾಶದಿಂದ ವಿಮಾನ ಸಮುದ್ರಕ್ಕೆ ಇಳಿಯುವುದನ್ನು ಕಂಡ ಬೀಚ್‌ನಲ್ಲಿದ್ದ ಪ್ರವಾಸಿಗರು ಕ್ಷಣಕಾಲ ಬೆಚ್ಚಿಬಿದ್ದಿದ್ದಾರೆ. ಆದರೆ ಫೇಯ್ತ್‌ ಸುರಕ್ಷಿತವಾಗಿ ಹೊರಬಂದಿರುವುದು ತಿಳಿದು ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.

ಈಜಿಕೊಂಡೇ ದಡ ಸೇರಿದ ಪೈಲಟ್‌

ವಿಮಾನ ಸಮುದ್ರದ ಮೇಲೆ ಇಳಿದ ತಕ್ಷಣ ಫೇಯ್ತ್‌ ಅದರಿಂದ ಹೊರಬಂದಿದ್ದಾರೆ. ಬಳಿಕ ಈಜಿಕೊಂಡೇ ದಡ ಸೇರಿದ್ದಾರೆ. ಕೆಲವೇ ಕ್ಷಣಗಳಲ್ಲಿ ಸ್ಥಳೀಯರು ಹಾಗೂ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅವರಿಗೆ ನೆರವು ನೀಡಿದ್ದಾರೆ.

ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಈ ಘಟನೆಯಲ್ಲಿ ಫೇಯ್ತ್‌ಗೆ ಯಾವುದೇ ಗಾಯಗಳಾಗಿಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ.ಜನನಿಬಿಡ ಬೀಚ್‌ ಪ್ರದೇಶವನ್ನು ತಪ್ಪಿಸಿ ವಿಮಾನವನ್ನು ಸಮುದ್ರದತ್ತ ತಿರುಗಿಸಿದ ಫೇಯ್ತ್‌ ಅವರ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಅವರು ತೋರಿದ ಸಮಯಪ್ರಜ್ಞೆ ಹಾಗೂ ವಿಮಾನವನ್ನು ನಿಯಂತ್ರಿಸಿದ ರೀತಿ ಹಲವರ ಗಮನ ಸೆಳೆದಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular