HomeLatest Newsಪ್ರವಾಹದಲ್ಲಿ ಸಿಲುಕಿದ್ದ ಬೈಕ್ ಸವಾರನಿಗೆ ದುಪ್ಪಟವೇ ಹಗ್ಗ ಪ್ರಾಣದ ಹಂಗು ತೊರೆದು ರಕ್ಷಿಸಿದ ನವದಂಪತಿ

ಪ್ರವಾಹದಲ್ಲಿ ಸಿಲುಕಿದ್ದ ಬೈಕ್ ಸವಾರನಿಗೆ ದುಪ್ಪಟವೇ ಹಗ್ಗ ಪ್ರಾಣದ ಹಂಗು ತೊರೆದು ರಕ್ಷಿಸಿದ ನವದಂಪತಿ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದ ದಿಢೀರ್ ಪ್ರವಾಹ ಉಂಟಾಗಿದ್ದು, ನೀರಿನ ನಡುವೆ ಸಿಲುಕಿದ್ದ ಬೈಕ್ ಸವಾರನನ್ನು ನವದಂಪತಿಯೊಂದು ಸಾಹಸ ಮಾಡಿ ರಕ್ಷಿಸಿದೆ. ಮಹಿಳೆ ಧರಿಸಿದ್ದ ದುಪ್ಪಟವನ್ನೇ ಹಗ್ಗದಂತೆ ಬಳಸಿ ಬೈಕ್ ಸವಾರನನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದಂಪತಿಯ ಧೈರ್ಯ ಮತ್ತು ಸಮಯಪ್ರಜ್ಞೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಭಟಿಯಾತ್‌ನ ಭರ್ಮಲಾ ಪ್ರದೇಶದ ಕಾಕಿಯಾರ-ಟುನುಹಟ್ಟಿ ರಸ್ತೆಯಲ್ಲಿ ಭಾರಿ ಮಳೆಯಾಗಿದ್ದು, ಕೆಲವೇ ಕ್ಷಣಗಳಲ್ಲಿ ರಸ್ತೆಯಲ್ಲಿ ಪ್ರವಾಹದ ನೀರು ತುಂಬಿಕೊಂಡಿತ್ತು.

ಈ ವೇಳೆ ಘಟಶ್ನಿಯ ಮಾಮ್ಲಾ ಗ್ರಾಮದ ಬೈಕ್ ಸವಾರನೊಬ್ಬ ನೀರು ತುಂಬಿದ್ದ ರಸ್ತೆಯನ್ನು ದಾಟಲು ಮುಂದಾಗಿದ್ದ. ಆದರೆ ನೀರಿನ ರಭಸ ಹೆಚ್ಚಾದ ಕಾರಣ ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡು ಪ್ರವಾಹದ ಮಧ್ಯೆ ಸಿಲುಕಿಕೊಂಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

https://x.com/iNikhilsaini/status/2094633885892239661

ಬೈಕ್ ಸವಾರ ನೀರಿನಲ್ಲಿ ಸಿಲುಕಿರುವುದನ್ನು ಗಮನಿಸಿದ ರಸ್ತೆ ಬದಿಯಲ್ಲಿದ್ದ ನವದಂಪತಿ ಕೂಡಲೇ ಆತನ ನೆರವಿಗೆ ಧಾವಿಸಿದ್ದಾರೆ. ನೀರಿನ ರಭಸ ಹೆಚ್ಚಾಗಿದ್ದರಿಂದ ಆತನನ್ನು ನೇರವಾಗಿ ಎಳೆದುಕೊಂಡು ಬರುವುದು ಕಷ್ಟವಾಗಿತ್ತು.

ಹೀಗಾಗಿ ಮಹಿಳೆ ಧರಿಸಿದ್ದ ದುಪ್ಪಟವನ್ನೇ ಹಗ್ಗದಂತೆ ಬಳಸಲು ದಂಪತಿ ಮುಂದಾಗಿದ್ದಾರೆ. ದುಪ್ಪಟವನ್ನು ಬೈಕ್ ಸವಾರನ ಕಡೆಗೆ ಚಾಚಿ, ಆತ ಅದನ್ನು ಹಿಡಿದುಕೊಳ್ಳುವಂತೆ ಮಾಡಿದ್ದಾರೆ.

ನಂತರ ದಂಪತಿಯೊಂದಿಗೆ ಇದ್ದ ಕುಟುಂಬಸ್ಥರೂ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಎಲ್ಲರೂ ಸೇರಿ ದುಪ್ಪಟದ ಸಹಾಯದಿಂದ ಬೈಕ್ ಸವಾರನನ್ನು ನಿಧಾನವಾಗಿ ರಸ್ತೆ ಬದಿಗೆ ಎಳೆದುಕೊಂಡು ಬಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ

ಪ್ರವಾಹದ ನೀರು ಕೊಚ್ಚಿಕೊಂಡು ಹೋಗುವ ಅಪಾಯವಿದ್ದರೂ ತಮ್ಮ ಸುರಕ್ಷತೆಯನ್ನೂ ಲೆಕ್ಕಿಸದೆ ಬೈಕ್ ಸವಾರನ ನೆರವಿಗೆ ಧಾವಿಸಿದ ದಂಪತಿ ಮತ್ತು ಕುಟುಂಬಸ್ಥರ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ತಕ್ಷಣ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ದುಪ್ಪಟವನ್ನು ಬಳಸಿ ರಕ್ಷಣೆ ಮಾಡಿದ ಅವರ ಸಮಯಪ್ರಜ್ಞೆ ಬೈಕ್ ಸವಾರನ ಜೀವ ಉಳಿಸಲು ನೆರವಾಗಿದೆ. ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ, ‘ಇಂತಹ ಸಮಯದಲ್ಲಿ ನೆರವಿಗೆ ಧಾವಿಸುವ ಧೈರ್ಯ ಎಲ್ಲರಲ್ಲೂ ಇರಬೇಕು’ ಎಂದು ನೆಟ್ಟಿಗರು ದಂಪತಿಯನ್ನು ಶ್ಲಾಘಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular