BIG NEWS: ವಿಮಾನದಲ್ಲಿ ಸಹಪ್ರಯಾಣಿಕನಿಂದ ದುರ್ವರ್ತನೆ; ಮಹಿಳೆಗೆ ಲೈಂಗಿಕ ಕಿರುಕುಳ

ಬೆಂಗಳೂರು: ಸಹಪ್ರಯಾಣಿಕನೊಬ್ಬ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಮಹಿಳೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ಏರ್ ಪೋರ್ಟ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ರಂಗನಾಥ್ (50) ಮಹಿಳೆಗೆ ವಿಮಾನದಲ್ಲಿ ಕಿರುಕುಳ ನೀಡಿದ ಪ್ರಯಾಣಿಕ. ಲುಫ್ತಾನ್ಸ್ ಏರ್ ಲೈನ್ಸ್ LH 0754 ವಿಮಾನ ಪ್ರಾಂಕ್ ಫರ್ಟ್ ನಿಂದ ಬೆಂಗಳೂರಿಗೆ ಆಗಮಿಸುತ್ತಿತ್ತು. ಈ ವಿಮಾನದಲ್ಲಿ ಆಂಧ್ರ ಪ್ರದೇಶದ ತಿರುಪತಿ ಮೂಲದ ಮಹಿಳೆ ಬೆಂಗಳೂರಿಗೆ ಬರುತ್ತಿದ್ದರು.

ವಿಮಾನ ಪ್ರಯಾಣ ಆರಂಭವಾದ ನಾಲ್ಕು ಗಂಟೆ ಬಳಿಕ ಮಹಿಳೆ ತನ್ನ ಸೀಟ್ ನಂ 38Kಯಲ್ಲಿ ನಿದ್ದೆಗೆ ಜಾರಿದ್ದರು. ಮಹಿಳೆಯ ಸೀಟ್ ನ ಪಕ್ಕದ ಸೀಟ್ ನಂ 38J ನಲ್ಲಿ ಕುಳಿತಿದ್ದ ಸಹಪ್ರಯಾಣಿಕ ರಂಗನಾಥ್ ತಡರಾತ್ರಿ ಮಹಿಳೆಯ ಖಾಸಗಿ ಅಂಗಾಂಗ ಮುಟ್ಟಿ ಕಿರುಕುಳ ನೀಡಿದ್ದಾನೆ. ಅದಾದ ಬಳಿಕ ಮತ್ತೆ ಮಧ್ಯರಾತ್ರಿ 12 ಗಂಟೆ ವೇಳೆಯಲ್ಲಿಯೂ ಸಹಪ್ರಯಾಣಿಕ ರಂಗನಾಥ್ ಮಹಿಳೆಗೆ ಇದೇ ರೀತಿ ಕಿರುಕುಳ ನೀಡಿದ್ದಾನೆ. ಈ ವೇಳೆ ಮಹಿಳೆ ವಿಮಾನ ಸಿಬ್ಬಂದಿಗಳನ್ನು ಕರೆದು ವಿಷಯ ತಿಳಿಸಿದ್ದಾರೆ.

ಬಳಿಕ ಮಹಿಳೆ ಬೇರೆ ಸೀಟ್ ನಲ್ಲಿ ಹೋಗಿ ಕುಳಿತುಕೊಂಡಿದ್ದಾರೆ. ವಿಮಾನ ಕೆಐಎ ನಲ್ಲಿ ಲ್ಯಾಂಡ್ ಆದ ಬಳಿಕ ಮಹಿಳೆ ವಿಮಾನ ನಿಲ್ದಾಣ ಠಾಣೆಯಲ್ಲಿ ರಂಗನಾಥ್ ವಿರುದ್ಧ ದೂರು ದಾಖಲಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read