ಆಗಸದಲ್ಲಿದ್ದ ವೇಳೆ ದಿಢೀರನೇ ತೆರೆದುಕೊಂಡ ವಿಮಾನದ ಬಾಗಿಲು; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಆಗಸದಲ್ಲಿ ಹಾರುತ್ತಿದ್ದ ಸರಕು ಸಾಗಾಟದ ವಿಮಾನವೊಂದರ ಬಾಗಿಲೊಂದು ದಿಢೀರ್‌ ತೆರೆದುಕೊಂಡ ಘಟನೆಯ ವಿಡಿಯೋ ವೈರಲ್ ಆಗಿದೆ.

ಜೂನ್ 12ರಂದು ಬ್ರೆಜ಼ಿಲ್‌ನ ಸಾವೋ ಲೂಯಿಸ್‌ನಿಂದ ಸಲ್ವಡಾರ್‌ಗೆ ಈ ವಿಮಾನ ಸಾಗುತ್ತಿತ್ತು. ಟ್ವಿಟರ್‌ನಲ್ಲಿ ಶೇರ್‌ ಮಾಡಲಾದ ಈ ವಿಡಿಯೋ ವೈಮಾನಿಕ ಕ್ಷೇತ್ರದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ಭಾರೀ ಜೋರಾದ ಗಾಳಿಯು ವಿಮಾನದೊಳಗೆ ಬರುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದ್ದು, ವಿಮಾನದ ಹೊರಗಿನ ಮೋಡಗಳನ್ನೂ ಕಾಣಬಹುದಾಗಿದೆ.

“ಬ್ರೆಜ಼ಿಲಿಯನ್ ಗಾಯಕ ಟಿಯರ‍್ರಿ ಹಾಗೂ ಆತನ ಬ್ಯಾಂಡ್‌ ಸದಸ್ಯರನ್ನು ಹೊತ್ತು ಸಾಗುತ್ತಿದ್ದ ಎನ್‌ಎಚ್‌ಆರ್‌ ಟ್ಯಾಕ್ಸಿ ಏರೋ ಸಂಸ್ಥೆಯ ಎಂಬ್ರೇಯರ್‌-110ನಲ್ಲಿ ಈ ಘಟನೆ ಜರುಗಿದೆ,” ಎಂದು ಸುದ್ದಿ ಸಂಸ್ಥೆಯೊಂದು ತಿಳಿಸಿದೆ.

ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ವಿಮಾನವು ಸುರಕ್ಷಿತವಾಗಿ ಸಾವೋ ಲೂಯಿಸ್‌ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.

https://twitter.com/aviationbrk/status/1668920399839522820?ref_src=twsrc%5Etfw%7Ctwcamp%5Etweetembed%7Ctwterm%5E1668920399839522820%7Ctwgr%5E14f40aa2bf412e4c3a05cc7f26964c1726b5b29b%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fflights-cargo-door-opens-mid-air-in-brazil-scary-video-goes-viral-2394306-2023-06-17

https://twitter.com/aviationbrk/status/1668921163626561536?ref_src=twsrc%5Etfw%7Ctwcamp%5Etweetembed%7Ctwterm%5E1668921163626561536%7Ctwgr%5E14f40aa2bf412e4c3a05cc7f26964c1726b5b29b%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fflights-cargo-door-opens-mid-air-in-brazil-scary-video-goes-viral-2394306-2023-06-17

https://twitter.com/DarylWe42500813/status/1668963928318115841?ref_src=twsrc%5Etfw%7Ctwcamp%5Etweetembed%7Ctwterm%5E1668963928318115841%7Ctwgr%5E14f40aa2bf412e4c3a05cc7f26964c1726b5b29b%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fflights-cargo-door-opens-mid-air-in-brazil-scary-video-goes-viral-2394306-2023-06-17

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read