ನವದೆಹಲಿ: ಯುದ್ಧಪೀಡಿತ ಇರಾನ್ ನಿಂದ 290 ಭಾರತೀಯರು ವಾಪಸ್ ಆಗಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ 290 ವಿದ್ಯಾರ್ಥಿಗಳು ಬಂದಿಳಿದಿದ್ದು, ಅವರು ಬರುತ್ತಿದ್ದಂತೆ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆ ಮೊಳಗಿಸಲಾಗಿದೆ.
ಆಪರೇಷನ್ ಸಿಂಧು ಹೆಸರಿನಲ್ಲಿ ಭಾರತೀಯರನ್ನು ಏರ್ಲಿಫ್ಟ್ ಮಾಡಲಾಗಿದ್ದು, 290 ವಿದ್ಯಾರ್ಥಿಗಳು ಆಗಮಿಸಿದ್ದಾರೆ.
ಇರಾನ್ ನಿಂದ ಭಾರತಕ್ಕೆ ಕರೆತಂದಿದ್ದಕ್ಕೆ ಸಂಭ್ರಮಾಚರಣೆ ನಡೆಸಲಾಗಿದೆ. ಕೇಕ್ ಕತ್ತರಿಸಿ, ಹೂಮಾಲೆ ಹಾಕಿ ಸಂಬಂಧಿಕರು ಸಂಭ್ರಮಿಸಿದ್ದು, ದೆಹಲಿ ವಿಮಾನ ನಿಲ್ದಾಣ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ.
ಇರಾನ್ ನಿಂದ ದೆಹಲಿಗೆ 16 ಮಂದಿ ಕನ್ನಡಿಗರು ಕೂಡ ಆಗಮಿಸಿದ್ದಾರೆ. ಇವರು ದೆಹಲಿಯಿಂದ ಬೆಂಗಳೂರಿಗೆ ಹೊರಡಲಿದ್ದಾರೆ. ಬೆಳಗ್ಗೆ 7:30ರ ವಿಮಾನದಲ್ಲಿ ದೆಹಲಿಯಿಂದ ಎಂಟು ಮಂದಿ ಪ್ರಯಾಣ ಬೆಳೆಸಲಿದ್ದಾರೆ.
ಇರಾನ್ ನಲ್ಲಿ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತೀಯರು ತವರಿಗೆ ವಾಪಸ್ ಆಗಿದ್ದಾರೆ. ಇರಾನ್ ನಿಂದ ದೆಹಲಿಗೆ 290 ಭಾರತೀಯರು ವಾಪಸ್ ಆಗಿದ್ದು, ಕರ್ನಾಟಕದ 16 ಮಂದಿ ಸೇರಿ ಒಟ್ಟು 290 ಮಂದಿ ದೆಹಲಿಗೆ ಬಂದಿದ್ದಾರೆ.
ವಿದ್ಯಾರ್ಥಿಗಳು, ಮಹಿಳೆಯರು ಸೇರಿ ಒಟ್ಟು 290 ಜನ ಪಾಪಸಾಗಿದ್ದಾರೆ. ಜಮ್ಮು ಕಾಶ್ಮೀರದ 190, ಉತ್ತರ ಪ್ರದೇಶದ 42, ಕರ್ನಾಟಕದ 16, ದೆಹಲಿಯ 12, ಮಹಾರಾಷ್ಟ್ರದ 8, ಹರಿಯಾಣದ 7, ಬಿಹಾರ, ಪಶ್ಚಿಮ ಬಂಗಾಳದ ಇಬ್ಬರು, ಮಧ್ಯಪ್ರದೇಶದ ಇಬ್ಬರು, ಜಾರ್ಖಂಡ್ ನ ಓರ್ವ ಹಾಗೂ ವಿವಿಧ ರಾಜ್ಯದ 10 ಮಂದಿ ವಾಪಸ್ ಆಗಿದ್ದಾರೆ.
ಪರ್ಷಿಯನ್ ಕೊಲ್ಲಿ ರಾಷ್ಟ್ರವಾದ ಇಸ್ರೇಲ್ನೊಂದಿಗಿನ ಸಂಘರ್ಷವು ಕಡಿಮೆಯಾಗುವ ಲಕ್ಷಣವನ್ನು ತೋರಿಸದ ಕಾರಣ ಭಾರತ ಬುಧವಾರ ಇರಾನ್ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ‘ಆಪರೇಷನ್ ಸಿಂಧು’ ಅನ್ನು ಪ್ರಾರಂಭಿಸಿದೆ. ಇದಲ್ಲದೆ, ಕೆಲವು ವಿದ್ಯಾರ್ಥಿಗಳು ಗಾಯಗೊಂಡ ನಂತರ, ಇರಾನ್ ವಿದೇಶಾಂಗ ಸಚಿವಾಲಯವು ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

