HomeIndiaShocking News: ಕಳೆದ ವಾರವಷ್ಟೇ ಮದುವೆ; ಮೊದಲ ಪತಿಯಿಂದ ಜನಿಸಿದ್ದ ಮೂವರು ಮಕ್ಕಳನ್ನು ಕೊಂದು ದಂಪತಿ...

Shocking News: ಕಳೆದ ವಾರವಷ್ಟೇ ಮದುವೆ; ಮೊದಲ ಪತಿಯಿಂದ ಜನಿಸಿದ್ದ ಮೂವರು ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆ

ಕೇರಳದ ಕಣ್ಣೂರು ಜಿಲ್ಲೆಯ ಚೆರುಪುಳದಲ್ಲಿರುವ ನಿವಾಸವೊಂದರಲ್ಲಿ ಇಂದು ಬೆಳಗ್ಗೆ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಶವವಾಗಿ ಪತ್ತೆಯಾಗಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ ಕಳೆದ ವಾರ ವಿವಾಹವಾದ ದಂಪತಿಗಳು ಮಕ್ಕಳನ್ನು ಕೊಂದು ನಂತರ ನೇಣು ಹಾಕಿಕೊಂಡಿದ್ದಾರೆನ್ನಲಾಗಿದೆ.

ಮಕ್ಕಳು ಮೆಟ್ಟಿಲಿನ ಕಂಬಿಗಳಿಗೆ ನೇಣುಹಾಕಿಕೊಂಡಂತೆ ಕಂಡುಬಂದಿದ್ದರೆ ಮನೆಯಲ್ಲಿದ್ದ ಸೀಲಿಂಗ್ ಫ್ಯಾನ್‌ಗೆ ದಂಪತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮೂವರು ಮಕ್ಕಳು ಮಹಿಳೆಯ ಮೊದಲ ಗಂಡನಿಗೆ ಜನಿಸಿದವರಾಗಿದ್ದಾರೆ.

ಇಂದು ಬೆಳಗ್ಗೆ ಇಂತಹ ಘಟನೆ ನಡೆದಿರುವ ಬಗ್ಗೆ ಅಲ್ಲಿನ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular