ಕೊಡಗು ಜಿಲ್ಲೆಯ ಮೀನುಗಾರಿಕೆ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‍ಸಿಎಸ್‍ಪಿ) ಮತ್ತು ಗಿರಿಜನ ಉಪ ಯೋಜನೆಯಡಿ (ಟಿಎಸ್‍ಪಿ) “ಮೀನು ಹಿಡಿಯುವ ಸಲಕರಣೆಗಳ ವಿತರಣೆ” ಸೌಲಭ್ಯಗಳನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಕೊಡಗು ಜಿಲ್ಲೆಯ ಮೀನುಗಾರಿಕೆ ಇಲಾಖೆ ವತಿಯಿಂದ ಜಿಲ್ಲಾವಲಯ ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ ಕಾರ್ಯಕ್ರಮದಡಿ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ “ಮೀನು ಹಿಡಿಯುವ ಸಲಕರಣೆಗಳನ್ನು” ಉಚಿತವಾಗಿ ವಿತರಿಸಲು “ಸೇವಾ ಸಿಂಧು” ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಹ ಮೀನುಗಾರರಿಗೆ/ ಮೀನು ಕೃಷಿಕರಿಗೆ ಅರ್ಜಿ ಸಲ್ಲಿಸಲು ಆಗಸ್ಟ್, 31 ಕೊನೆಯ ದಿನವಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಪೂರ್ಣ/ ಅರೇಕಾಲಿಕ ಮೀನುಗಾರರಾಗಿರಬೇಕು. ಕೊಡಗು ಜಿಲ್ಲೆಯಲ್ಲಿ ನೆಲೆಸಿರಬೇಕು.
ಅರ್ಜಿಯೊಂದಿಗೆ ಭಾವಚಿತ್ರ-2(ಪಾಸ್‍ಪೋರ್ಟ್ ಸೈಜ್), ವಿಳಾಸ ಪುರಾವೆ, ಜಾತಿ ಮತ್ತು ಆಧಾಯ ಪ್ರಮಾಣ ಪತ್ರ (ನೂತನ ಆರ್‍ಡಿ ಸಂಖ್ಯೆ ಒಳಗೊಂಡಿರಬೇಕು). ಮೀನುಗಾರಿಕೆಯಲ್ಲಿ ತೊಡಗಿರುವ ಕುರಿತು ದೃಢೀಕರಣ ಪ್ರಮಾಣ ಪತ್ರ / ಪರವಾನಗಿ ಪ್ರತಿ. ಪಡಿತರ ಚೀಟಿ ಅಥವಾ ಇತರೆ ದಾಖಲಾತಿಗಳ ಪ್ರತಿ.
ಆಯ್ಕೆ ಪ್ರಕ್ರಿಯೆ ಸರ್ಕಾರದ ನಿಯಮಾನುಸಾರ ನಿಗಧಿಪಡಿಸಿರುವ ಗುರಿ ರೀತ್ಯಾ ಮಾಡಲಾಗುವುದು ನಿಗಧಿಪಡಿಸಿರುವ ಗುರಿಗಿಂತ ಹೆಚ್ಚಿನ ಅರ್ಜಿಗಳು ಸ್ವೀಕೃತವಾಗಿದ್ದಲ್ಲಿ ಜಿಲ್ಲಾ ಪಂಚಾಯತ್ ಫಲಾನುಭವಿ ಆಧಾರಿತ ಕಾರ್ಯಕ್ರಮಗಳ ಆಯ್ಕೆ ಸಮಿತಿಯಿಂದ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗೆ https://fisheries.karnataka.gov.in/fisheries-kodagu/public/ ನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಸಚಿನ್ ತಿಳಿಸಿದ್ದಾರೆ.