HomeIndiaWatch Video | ನಿಯಂತ್ರಣ ತಪ್ಪಿ ಪಲ್ಟಿಯಾದ ಮೀನು ತುಂಬಿದ ಟ್ರಕ್; ಪುಕ್ಕಟೆ 'ಫಿಶ್' ಗಾಗಿ...

Watch Video | ನಿಯಂತ್ರಣ ತಪ್ಪಿ ಪಲ್ಟಿಯಾದ ಮೀನು ತುಂಬಿದ ಟ್ರಕ್; ಪುಕ್ಕಟೆ ‘ಫಿಶ್’ ಗಾಗಿ ಮುಗಿಬಿದ್ದ ಜನ

ಬಿಹಾರದ ಕತಿಹಾರ್‌ನಲ್ಲಿ ಮೀನು ಸಾಗಿಸುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ಪಲ್ಟಿಯಾಗ್ತಿದ್ದಂತೆ ಸಹಾಯಕ್ಕೆ ಧಾವಿಸುವ ಬದಲು ಜನ ಚೀಲ, ಕವರ್ , ಬಟ್ಟೆ ತಂದು ಮೀನು ಸಂಗ್ರಹಣೆಗೆ ಮುಗಿಬಿದ್ದ ಘಟನೆ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ದುರ್ಘಟನೆ ಸಮಯದಲ್ಲಿ ತಮ್ಮ ಲಾಭಕ್ಕಾಗಿ ಮುಂದಾಗುವ ಜನರ ಮನಃಸ್ಥಿತಿಯನ್ನು ತೆರೆದಿಡುವ ದೃಶ್ಯವನ್ನು ಹಂಚಿಕೊಳ್ಳಲಾಗಿದೆ.

“ಬಿಹಾರದ ಕತಿಹಾರ್‌ನಲ್ಲಿ ಮೀನು ತುಂಬಿದ ಟ್ರಕ್ ನಿಯಂತ್ರಣವನ್ನು ಕಳೆದುಕೊಂಡ ನಂತರ ಜನರು ಮೀನುಗಳನ್ನು ಲೂಟಿ ಮಾಡುತ್ತಾರೆ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಸ್ತೆ ಮೇಲೆ ಬಿದ್ದ ಮೀನುಗಳು ಪ್ರಾಣ ಉಳಿಸಿಕೊಳ್ಳಲು ಜಿಗಿಯುತ್ತಿದ್ದರೆ ಅವುಗಳನ್ನು ಹಿಡಿದು ಹಿಡಿದು ಜನ ತಮ್ಮ ಚೀಲ ತುಂಬಿಸಿಕೊಳ್ಳಲು ಯತ್ನಿಸಿದ್ದಾರೆ. ಜನರ ಈ ನಡೆಯನ್ನ ನೆಟ್ಟಿಗರು ಹಾಸ್ಯಮಯವಾಗಿ ಟೀಕಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular