HomeLive Newsಇಂದು ಪ್ರೊ ಕಬ್ಬಡಿಯ ಮೊದಲ ಪಂದ್ಯದಲ್ಲಿ ಡಿಫೆಂಡರ್‌ಗಳ ಕಾಳಗ

ಇಂದು ಪ್ರೊ ಕಬ್ಬಡಿಯ ಮೊದಲ ಪಂದ್ಯದಲ್ಲಿ ಡಿಫೆಂಡರ್‌ಗಳ ಕಾಳಗ

ನೋಯಿಡಾದಲ್ಲಿನ ಪ್ರೊ ಕಬಡ್ಡಿ ಪಂದ್ಯಗಳು ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಡಿಸೆಂಬರ್ ಮೂರರಿಂದ ಪುಣೆಯಲ್ಲಿ ಕಬಡ್ಡಿ ಪಂದ್ಯಗಳಿರಲಿವೆ. ಇಂದು ಪ್ರೊ ಕಬ್ಬಡಿಯ  ಮೊದಲ ಪಂದ್ಯದಲ್ಲಿ ಸಿಂಹದಮರಿ ಸೈನ್ಯ ಪುಣೆರಿ ಪಲ್ಟಾನ್ ಮತ್ತು ಹರಿಯಾಣ ಸ್ಟೀಲರ್ಸ್ ಮುಖಾಮುಖಿಯಾಗಲಿವೆ.

ಪುಣೆರಿ ಪಲ್ಟಾನ್ ಹಾಗೂ ಹರಿಯಾಣ ಸ್ಟೀಲರ್ಸ್ ತಂಡದಲ್ಲಿ ಡಿಫೆಂಡರ್ಗಳದ್ದೇ ಅಬ್ಬರ ಜೋರಾಗಿದ್ದು, ಗೌರವ್ ಕತ್ರಿ ಹಾಗೂ ಮೊಹಮ್ಮದ್ರೇಜಾ ಶಾದ್ಲು ಈ ಇಬ್ಬರಲ್ಲಿ ಯಾವ ಡಿಫೆಂಡರ್ ಮೇಲುಗೈ ಸಾಧಿಸಲಿದ್ದಾರೆ ಕಾದು ನೋಡಬೇಕಾಗಿದೆ. ಹರಿಯಾಣ ಸ್ಟೀಲರ್ಸ್ ಪ್ರೊ ಕಬಡ್ಡಿ ಅಂಕ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದರೆ, ಪುಣೆರಿ ಪಲ್ಟಾನ್ ಐದನೇ ಸ್ಥಾನ ಕಾಯ್ದುಕೊಂಡಿದೆ. ಇದಾದ ಬಳಿಕ ಮತ್ತೊಂದು ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ಸೆಣಸಾಡಲಿವೆ.

For Latest News Updates, Join Our Whatsapp Community🚩
RELATED ARTICLES

Most Popular