ರಿವೀಲ್‌ ಆಗಿದೆ ಟೊಯೋಟಾದ ಹೊಸ SUVಯ ಫಸ್ಟ್‌ ಲುಕ್‌; ಇಲ್ಲಿದೆ ಬೆಲೆ ಮತ್ತು ಫೀಚರ್‌ಗಳ ವಿವರ

ಟೊಯೋಟಾ ಕಂಪನಿಯ ಹೊಸ ಕಾರು ಬಿಡುಗಡೆಗೆ ಸಜ್ಜಾಗಿದೆ. ಕ್ರಾಸ್ಒವರ್ ಅರ್ಬನ್ ಕ್ರೂಸರ್ ಟೈಸರ್‌ ಅನ್ನು ಟೊಯೋಟಾ ಎಪ್ರಿಲ್‌ 3ರಂದು ಲಾಂಚ್  ಮಾಡಲಿದೆ. ಕಾರಿನ ಮೊದಲ ಝಲಕ್‌ ಅನ್ನು ಕಂಪನಿ ಅಧಿಕೃತವಾಗಿ ಹಂಚಿಕೊಂಡಿದೆ. ಇದರಲ್ಲಿ SUVಯ ಲುಕ್‌ ಅನ್ನು ರಿವೀಲ್‌ ಮಾಡಲಾಗಿದೆ. ಎಸ್‌ಯುವಿಯ ಹೊರಗೆ ಮತ್ತು ಒಳಗೆ ಕೆಲವು ನವೀಕರಣಗಳಿವೆ.

ಮುಂಭಾಗದ ನೋಟ ಕೂಡ ಅದ್ಭುತವಾಗಿದೆ. ಅರ್ಬನ್ ಕ್ರೂಸರ್ ಟೈಸರ್‌ನಲ್ಲಿ ಹೊಸ ಗ್ರಿಲ್ ಮತ್ತು ಇತರ ಕೆಲವು ಸಣ್ಣ ಬದಲಾವಣೆಗಳನ್ನು ಕಾಣಬಹುದು. ಹಿಂಭಾಗದಲ್ಲಿ ಹೆಚ್ಚಿನ ಬದಲಾವಣೆಗಳೇನಿಲ್ಲ. ಕ್ಯಾಬಿನ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳು ಫ್ರಂಟ್‌ನಲ್ಲಿವೆ.

ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಹೆಡ್ಸ್-ಅಪ್ ಡಿಸ್‌ಪ್ಲೇ,  360-ಡಿಗ್ರಿ ಕ್ಯಾಮೆರಾ, ಆಪಲ್ ಕಾರ್‌ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮುಂತಾದ ಹಲವು ಫೀಚರ್‌ಗಳು ಇದರಲ್ಲಿವೆ. ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್, ಇಬಿಡಿ ಮತ್ತು ಸೀಟ್-ಬೆಲ್ಟ್ ಅಲಾರಾಂ ಕೂಡ ಅಳವಡಿಸಲಾಗಿದೆ.

ಇದು ಕೂಡ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ. 1.2 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಮತ್ತು 1.0 ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಆಯ್ಕೆ ಇರುತ್ತದೆ. 1.2 ಲೀಟರ್ ಎಂಜಿನ್ 89bhp ಪವರ್ ಮತ್ತು 113Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.0 ಲೀಟರ್ ಎಂಜಿನ್ 99bhp ಪವರ್ ಮತ್ತು 148Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಅನ್ನು ಎರಡೂ ಎಂಜಿನ್‌ಗಳೊಂದಿಗೆ ಪ್ರಮಾಣಿತವಾಗಿ ಒದಗಿಸಬಹುದು. ಕಂಪನಿಯು 1.2 ಲೀಟರ್‌ ಎಂಜಿನ್‌ನೊಂದಿಗೆ 5-ಸ್ಪೀಡ್ AMT ಘಟಕ ಮತ್ತು 1.0 ಲೀಟರ್‌ ಎಂಜಿನ್‌ನೊಂದಿಗೆ 6-ಸ್ಪೀಡ್ ಟಾರ್ಕ್ ಪರಿವರ್ತಕ ಸ್ವಯಂಚಾಲಿತ ಗೇರ್‌ಬಾಕ್ಸ್‌ನ ಆಯ್ಕೆಯನ್ನು ಸಹ ನೀಡಬಹುದು. ಇದರ ಆರಂಭಿಕ ಬೆಲೆ ಸುಮಾರು 8 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read