ಭಾರತದಾದ್ಯಂತ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಅಭಿನಯದ 69ನೇ ಸಿನಿಮಾ ಟೈಟಲ್ ಹಾಗೂ ಫಸ್ಟ್ ಲುಕ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ. ಎಚ್ ವಿನೋತ್ ನಿರ್ದೇಶನದ ಈ ಚಿತ್ರಕ್ಕೆ ‘ಜನನಾಯಗನ್’ ಎಂಬ ಶೀರ್ಷಿಕೆ ಇಡಲಾಗಿದ್ದು, ಕರ್ನಾಟಕದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ ಜವಾಬ್ದಾರಿಯನ್ನು ಒತ್ತಿದೆ.
ಈ ಚಿತ್ರದಲ್ಲಿ ದಳಪತಿ ವಿಜಯ್ ಸೇರಿದಂತೆ ಪೂಜಾ ಹೆಗ್ಡೆ, ಪ್ರಕಾಶ್ ರಾಜ್, ಪ್ರಿಯಾಮಣಿ, ನರೇನ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಮತ್ತು ಬಾಬಿ ಡಿಯೋಲ್, ತೆರೆ ಹಂಚಿಕೊಳ್ಳುತ್ತಿದ್ದು, ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಇದು ದಳಪತಿ ವಿಜಯ್ ಅವರ ಅಂತಿಮ ಸಿನಿಮಾ ಎಂದು ಹೇಳಲಾಗಿದೆ.
We call him #JanaNayagan #ஜனநாயகன் ♥️#Thalapathy69FirstLook#Thalapathy @actorvijay sir #HVinoth @thedeol @prakashraaj @menongautham #Priyamani @itsNarain @hegdepooja @_mamithabaiju @anirudhofficial @Jagadishbliss @LohithNK01 @sathyaDP @ActionAnlarasu @Selva_ArtDir… pic.twitter.com/t16huTvbqc
— KVN Productions (@KvnProductions) January 26, 2025