ಶಿವಮೊಗ್ಗದಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಬಾಕ್ಸಿಂಗ್ ಕ್ರೀಡಾಕೂಟ: ಅತ್ಯಾಧುನಿಕ ಬಾಕ್ಸಿಂಗ್ ರಿಂಗ್ ಬಳಕೆ

ಶಿವಮೊಗ್ಗ: ಶಿವಮೊಗ್ಗದಲ್ಲಿ ಮೊಟ್ಟಮೊದಲ ಬಾರಿಗೆ ಶಾಲಾ ಶಿಕ್ಷಣ(ಪದವಿ ಪೂರ್ವ) ಇಲಾಖೆಯು 2024-25 ನೇ ಸಾಲಿನ  ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಬಾಕ್ಸಿಂಗ್ ಕ್ರೀಡಾಕೂಟವನ್ನು  ದಿನಾಂಕ  21/10/2024 ಮತ್ತು 22/10/2024 ರಂದು ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದೆ.

ಇದಕ್ಕೆ ಅವಶ್ಯಕತೆ ಇರುವ ಬಾಕ್ಸಿಂಗ್ ರಿಂಗ್ ಅನ್ನು ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್(ಕಾಬಾ) ಬೆಂಗಳೂರು ಇವರು ಶಿವಮೊಗ್ಗ ಜಿಲ್ಲೆಗೆ ಒದಗಿಸಿರುತ್ತಾರೆ.

ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಅತ್ಯಾಧುನಿಕ ಅಂತರಾಷ್ಟ್ರೀಯ ಮಾದರಿಯ ಬಾಕ್ಸಿಂಗ್ ರಿಂಗ್ ಇದಾಗಿರುತ್ತದೆ. ಸುಮಾರು ಹತ್ತು ಲಕ್ಷಗಳ ವೆಚ್ಚದ ಅತ್ಯಾಧುನಿಕ ಹೊಸ ಬಾಕ್ಸಿಂಗ್ ರಿಂಗ್ ಅನ್ನು ಕಾಬಾದವರು ಶಿವಮೊಗ್ಗ ಜಿಲ್ಲೆಗೆ ಒದಗಿಸಿರುತ್ತಾರೆ.

ಕೇವಲ ಮೂರು ಜಿಲ್ಲೆಗಳಲ್ಲಿ ಮಾತ್ರ ಬಾಕ್ಸಿಂಗ್ ರಿಂಗ್ ಇದ್ದು, ಶಿವಮೊಗ್ಗದ ನೂತನ ರಿಂಗ್ ಅಂತರಾಷ್ಟ್ರೀಯ ಮಟ್ಟದಾಗಿರುತ್ತದೆ. ಈ ಬಾಕ್ಸಿಂಗ್ ಕ್ರೀಡಾಕೂಟದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಪದವಿ ಪೂರ್ವ ಕಾಲೇಜುಗಳಿಂದ  ಸುಮಾರು 150 ಕ್ರೀಡಾಳುಗಳು ಭಾಗವಹಿಸಿದ್ದಾರೆ. 19 ವರ್ಷ ದೊಳಗಿನ 46 ಕೆಜಿಯಿಂದ 95 ಕೆಜಿ ವರೆಗಿನ 11 ವಿಭಾಗಗಳಲ್ಲಿ ಬಾಲಕರು ಮತ್ತು 12 ವಿಭಾಗಗಳಲ್ಲಿ ಬಾಲಕಿಯರು ಭಾಗವಹಿಸಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read