HomeInternationalSHOCKING : ನೋವಿಲ್ಲದೇ ಸಾಯುವ ‘ಸೂಸೈಡ್ ಪಾಡ್’ ನಿಂದ ಮೊದಲ ಸಾವು : ಬಟನ್...

SHOCKING : ನೋವಿಲ್ಲದೇ ಸಾಯುವ ‘ಸೂಸೈಡ್ ಪಾಡ್’ ನಿಂದ ಮೊದಲ ಸಾವು : ಬಟನ್ ಒತ್ತಿ ಆತ್ಮಹತ್ಯೆಗೆ ಶರಣಾದ ಮಹಿಳೆ ..!

ಅನಾರೋಗ್ಯದಿಂದ ಬಳಲುತ್ತಿದ್ದ 64 ವರ್ಷದ ಅಮೆರಿಕನ್ ಮಹಿಳೆ ಆತ್ಮಹತ್ಯಾ ಯಂತ್ರವನ್ನು ಬಳಸಿಕೊಂಡು ಈ ಜಗತ್ತಿಗೆ ವಿದಾಯ ಹೇಳಿದ್ದಾರೆ ಎಂದು ವರದಿಯಾಗಿದೆ.

ವರದಿ ಪ್ರಕಾರ, ಸ್ವಿಟ್ಜರ್ಲೆಂಡ್ನಲ್ಲಿ, ಅವರು ನೋವಿಲ್ಲದೇ ಸಾಯುವ ‘ಆತ್ಮಹತ್ಯಾ ಯಂತ್ರ'( ಸೂಸೈಡ್ ಪಾಡ್)   ದಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಮೆಷಿನ್ ನಲ್ಲಿ ಒಳಗೆ ಹೋಗಿ ಬಾಗಿಲು ಹಾಕಿಕೊಂಡು ಸ್ವಿಚ್ ಆನ್ ಮಾಡಿದರೆ ಕೆಲ ನಿಮಿಷಯದಲ್ಲಿ ಯಾವುದೇ ನೋವು ಇಲ್ಲದೇ ಪ್ರಾಣ ಹೋಗುತ್ತದೆ ಎಂದು ವರದಿಯಾಗಿದೆ. ಹೀಗೆ ಮಹಿಳೆಯೊಬ್ಬರು ಮೊದಲ ಬಾರಿಗೆ ಈ ಯಂತ್ರ ಬಳಸಿಕೊಂಡು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯು ಜಗತ್ತನ್ನು ಬೆಚ್ಚಿಬೀಳಿಸಿದೆ ಮತ್ತು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹಲವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಸಾರ್ಕೋ ಎಂಬ ಸಂಸ್ಥೆ ಈ ವಿನೂತನ ಯಂತ್ರವನ್ನು ಆವಿಷ್ಕರಿಸಿದ್ದು, 2019ರಲ್ಲೇ ಈ ಆತ್ಮಹತ್ಯಾ ಸಾಧನವನ್ನು ಸಂಸ್ಥೆ ರಿವೀಲ್ ಮಾಡಿತ್ತು. ಈ ಯಂತ್ರವನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡವರು ಯಾವುದೇ ನೋವು ಅನುಭವಿಸದೇ ಸಾಯುತ್ತಾರೆ. ಈ ಯಂತ್ರವು ಆತ್ಮಹತ್ಯೆಗಾಗಿ ಬರುವ ವ್ಯಕ್ತಿ ಬಟನ್ ಒತ್ತಿದ ಕೂಡಲೇ ಆತನಿಗೆ ಆಕ್ಸಿಜನ್ ಬದಲಿಗೆ ನೈಟ್ರೋಜನ್ ಬಿಡುಗಡೆ ಮಾಡುತ್ತದೆ. ಇದರಿಂದ ವ್ಯಕ್ತಿ ಆಕ್ಸಿಜನ್ ಸಿಗದೇ ಹೈಪೋಕ್ಸಿಯಾದಿಂದ ಕೇವಲ ಒಂದೇ ನಿಮಿಷದಲ್ಲಿ ಪ್ರಾಣಬಿಡುತ್ತಾನೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular