BREAKING: 291 ಜನ ಮೃತಪಟ್ಟ ಒಡಿಶಾ ರೈಲು ದುರಂತದಲ್ಲಿ ಮೊದಲ ಬಂಧನ: ಮೂವರು ರೈಲ್ವೇ ನೌಕರರು ಅರೆಸ್ಟ್

291 ಜನರನ್ನು ಬಲಿತೆಗೆದುಕೊಂಡ ಬಾಲಸೋರ್ ರೈಲು ದುರಂತಕ್ಕೆ ಸಂಬಂಧಿಸಿದಂತೆ ಮೂವರನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ಬಂಧಿಸಿದೆ.

ಬಂಧಿತ ಮೂವರು ರೈಲ್ವೇ ನೌಕರರಾಗಿದ್ದಾರೆ. ಮೂವರು ಉದ್ಯೋಗಿಗಳನ್ನು ಹಿರಿಯ ಸೆಕ್ಷನ್ ಇಂಜಿನಿಯರ್ ಅರುಣ್ ಕುಮಾರ್ ಮೊಹಂತ, ಸೆಕ್ಷನ್ ಇಂಜಿನಿಯರ್ ಮೊಹಮ್ಮದ್ ಅಮೀರ್ ಖಾನ್ ಮತ್ತು ತಂತ್ರಜ್ಞ ಪಪ್ಪು ಕುಮಾರ್ ಎಂದು ಗುರುತಿಸಲಾಗಿದೆ. ಅವರ ವಿರುದ್ಧ ಸೆಕ್ಷನ್ 304 ಮತ್ತು 201 ಸಿಆರ್‌ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜೂನ್ 2 ರಂದು ನಡೆದ ರೈಲುಗಳ ಅಪಘಾತಕ್ಕೆ ಎರಡು ಇಲಾಖೆ ಸಿಬ್ಬಂದಿ ಕಾರಣ. ರೈಲ್ವೆಯ ಸಿಗ್ನಲ್ ಮತ್ತು ಕಾರ್ಯನಿರ್ವಹಣೆ ಸಿಬ್ಬಂದಿ ಕಾರಣ ಎಂದು ರೈಲ್ವೆ ಸುರಕ್ಷತಾ ಆಯುಕ್ತರ ವರದಿಯಲ್ಲಿ ಸಿಬ್ಬಂದಿ ಎಡವಟ್ಟಿನ ಬಗ್ಗೆ ಉಲ್ಲೇಖಿಸಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read