ಬೆಳಗಾವಿ: ಬೆಳಗಾವಿಯ ಜಿಮಖಾನ ಕ್ಲಬ್ ನಲ್ಲಿ ಫೈರಿಂಗ್, ಹತ್ಯೆಗೆ ಯತ್ನ ನಡೆದಿದೆ. ಪೊಲೀಸ್ ಕಮಿಷನರ್ ಕಚೇರಿ ಪಕ್ಕದಲ್ಲೇ ಘಟನೆ ನಡೆದಿದ್ದು, ಆತಂಕ ಮೂಡಿಸಿದೆ. ದುಷ್ಕರ್ಮಿಗಳ ದಾಳಿ ವೇಳೆ ಸುರೇಶ್ ಜಾಲಗಾರ ಎಂಬುವವರು ತಪ್ಪಿಸಿಕೊಂಡಿದ್ದಾರೆ.
ಸುರೇಶ್ ತಪ್ಪಿಸಿಕೊಳ್ಳುತ್ತಿದ್ದಂತೆ ದುಷ್ಕರ್ಮಿಗಳು ಓಪನ್ ಫೈಟಿಂಗ್ ಮಾಡಿದ್ದಾರೆ. ಜಿಮಖಾನ ಕ್ಲಬ್ ಗೆ 5 ಜನ ಪ್ರವೇಶಿಸಿದ್ದು, ಇಬ್ಬರು ಹೊರಗಿದ್ದರು. ಮೂವರು ಒಳಗೆ ನುಗ್ಗಿದ್ದರು. ರಮ್ಮಿ ಆಡುತಿದ್ದ ಸುರೇಶ್ ಜಾಲಗಾರನ ತಲೆಗೆ ಗುಂಡಿಟ್ಟು ಹತ್ಯೆ ಮಾಡಲು ಯತ್ನಿಸಿದ್ದಾರೆ. ಗನ್ ತಳ್ಳಿ ಸುರೇಶ್ ತಪ್ಪಿಸಿಕೊಳ್ಳುತ್ತಿದ್ದಂತೆ ಆರೋಪಿಗಳು ಗಾಳಿಯಲ್ಲಿ ಫೈರಿಂಗ್ ಮಾಡಿ ಪರಾರಿಯಾಗಿದ್ದಾರೆ.
ಈ ಹಿಂದೆ ಪ್ರಫುಲ್ ಪಾಟೀಲ್ ಮೇಲೆ ಸುರೇಶ್ ಫೈರಿಂಗ್ ಮಾಡಿದ್ದು, ಆತನ ಕಡೆಯ ಹುಡುಗರಿಂದ ಹತ್ಯೆಗೆ ಯತ್ನ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಭೇಟಿ ನೀಡಿದ್ದಾರೆ. ಮಾಹಿತಿ ಪಡೆದು ತನಿಖೆಗೆ ಸೂಚನೆ ನೀಡಿದ್ದಾರೆ.
ಪೊಲೀಸರು ಬಂದ ತಕ್ಷಣ ಓಡಿಬಂದ ಸುರೇಶ್ ನನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಘಟನಾ ಸ್ಥಳಕ್ಕೆ ಸುಕೋ ಟೀಂ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಡಿಸಿಪಿ ನಾರಾಯಣ ಭರಮನಿ ಕೂಡ ಭೇಟಿ ನೀಡಿದ್ದಾರೆ. ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

