HomeEntertainmentನನ್ನ ಹೆಸರು ನೋಡಿ ಶಾಕ್ ಆಯ್ತು: ನನಗೂ, 'ಫೈರ್' ಸಂಘಟನೆಗೂ ಸಂಬಂಧವಿಲ್ಲ: ನಟ ಸುದೀಪ್ ಸ್ಪಷ್ಟನೆ

ನನ್ನ ಹೆಸರು ನೋಡಿ ಶಾಕ್ ಆಯ್ತು: ನನಗೂ, ‘ಫೈರ್’ ಸಂಘಟನೆಗೂ ಸಂಬಂಧವಿಲ್ಲ: ನಟ ಸುದೀಪ್ ಸ್ಪಷ್ಟನೆ

ಬೆಂಗಳೂರು: ಫಿಲಂ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಈಕ್ವಾಲಿಟಿ(ಫೈರ್) ಸಂಘಟನೆಗೂ, ನನಗೂ ಸಂಬಂಧವಿಲ್ಲ. ಆ ಸಂಘಟನೆ ಪತ್ರದಲ್ಲಿ ನನ್ನ ಹೆಸರು ಇರುವುದು ತಿಳಿದು ಶಾಕ್ ಆಯ್ತು ಎಂದು ನಟ ಕಿಚ್ಚ ಸುದೀಪ್ ತಿಳಿಸಿದ್ದಾರೆ.

ನಟಿಯರ ಮೇಲಿನ ಲೈಂಗಿಕ ಶೋಷಣೆ ತಡೆ ಉದ್ದೇಶದಿಂದ ಮಲಯಾಳಂ ಚಿತ್ರರಂಗದ ರೀತಿ ಕನ್ನಡದ ಚಿತ್ರರಂಗದಲ್ಲಿಯೂ ಹೇಮಾ ಸಮಿತಿ ಮಾದರಿ ಸಮಿತಿ ರಚಿಸಬೇಕು ಎಂದು ಫೈರ್ ಸದಸ್ಯರ ನಿಯೋಗ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು.

ಮನವಿ ಪತ್ರದಲ್ಲಿ ಸುದೀಪ್, ರಮ್ಯಾ ಸೇರಿದಂತೆ ಅನೇಕರ ಹೆಸರುಗಳು ಇದ್ದವು. ಈ ಬಗ್ಗೆ ನಟಿ ಭಾವನಾ ರಾಮಣ್ಣ ಪ್ರಶ್ನೆ ಮಾಡಿದ್ದ ಹಿನ್ನಲೆಯಲ್ಲಿ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ಫೈರ್ ಸಂಸ್ಥೆಯ ಪತ್ರದಲ್ಲಿ ನನ್ನ ಹೆಸರು ಇರುವುದು ನನಗೆ ಗೊತ್ತಿಲ್ಲ. ಬೇರೆ ಯಾರೋ ಈ ಬಗ್ಗೆ ಹೇಳಿದಾಗ ಶಾಕ್ ಆಯ್ತು. ನನ್ನನ್ನು ಕೇಳದೆ ನನ್ನ ಹೆಸರು ಬಳಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular