ಭಾನುವಾರ ಓಮನ್ ಕೊಲ್ಲಿಯಲ್ಲಿ ಭಾರತೀಯ ಮೂಲದ 14 ಸಿಬ್ಬಂದಿ ಇದ್ದ ಎಂಟಿ ಯಿ ಚೆಂಗ್ 6 ಎಂಬ ತೈಲ ಹಡಗಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತು.
ತುರ್ತು ಪರಿಸ್ಥಿತಿಯ ಕರೆಗೆ ಸ್ಪಂದಿಸಿದ ಭಾರತೀಯ ನೌಕಾಪಡೆಯ ಹಡಗು ಐಎನ್ಎಸ್ ತಬರ್, ಸಮುದ್ರ ಭದ್ರತಾ ಕಾರ್ಯಾಚರಣೆಗಾಗಿ ಕೊಲ್ಲಿಯಲ್ಲಿ ನಿಯೋಜಿಸಲ್ಪಟ್ಟಿದ್ದು, ತಕ್ಷಣ ಸಹಾಯ ಮಾಡಿದೆ.
ಭಾರತೀಯ ನೌಕಾಪಡೆಯ ಪ್ರಕಾರ, ಜೂನ್ 29 ರಂದು ತೈಲ ಹಡಗು ಭಾರತದ ಕಾಂಡ್ಲಾದಿಂದ ಓಮನ್ನ ಶಿನಾಸ್ಗೆ ಹೋಗುತ್ತಿದ್ದಾಗ ಎಂಜಿನ್ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ವಿದ್ಯುತ್ ವ್ಯತ್ಯಯ ಉಂಟಾಯಿತು.ಅದೃಷ್ಟವಶಾತ್ ದುರಂತ ತಪ್ಪಿದೆ.
” ಭಾರತದ ಕಾಂಡ್ಲಾದಿಂದ ಓಮನ್ನ ಶಿನಾಸ್ಗೆ ಪ್ರಯಾಣಿಸುತ್ತಿದ್ದ ಭಾರತೀಯ ಮೂಲದ 14 ಸಿಬ್ಬಂದಿಯ ಹಡಗಿನ ಎಂಜಿನ್ ಕೋಣೆಯಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಂಡಿತು ಮತ್ತು ಹಡಗಿನಲ್ಲಿ ಸಂಪೂರ್ಣ ವಿದ್ಯುತ್ ವೈಫಲ್ಯ ಸಂಭವಿಸಿದೆ” ಎಂದು ಭಾರತೀಯ ನೌಕಾಪಡೆ ಎಕ್ಸ್ನಲ್ಲಿ ಪೋಸ್ಟ್ನಲ್ಲಿ ತಿಳಿಸಿದೆ.

