HomeLatest Newsನಟ ಮಯೂರ್ ಪಟೇಲ್ ವಿರುದ್ಧ ಎಫ್ಐಆರ್ ದಾಖಲು

ನಟ ಮಯೂರ್ ಪಟೇಲ್ ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರು: ಕುಡಿದು ವಾಹನ ಚಲನೆ ಮಾಡಿ ಕಾರ್ ಗಳಿಗೆ ಸರಣಿ ಅಪಘಾತ ಉಂಟು ಮಾಡಿದ ನಟ ಮಯೂರ್ ಪಟೇಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಓಲ್ಡ್ ಏರ್ಪೋರ್ಟ್ ರಸ್ತೆಯ ಕಮಾಂಡೋ ಆಸ್ಪತ್ರೆಯ ಸಿಗ್ನಲ್ ಬಳಿ ರಾತ್ರಿ 10 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಸಿಗ್ನಲ್ ನಲ್ಲಿ ನಿಂತಿದ್ದ ಕಾರ್ ಗಳಿಗೆ ಹಿಂಬದಿಯಿಂದ ನಟ ಮಯೂರ್ ಪಟೇಲ್ ಚಾಲನೆ ಮಾಡುತ್ತಿದ್ದ ಫಾರ್ಚೂನರ್ ಕಾರ್ ಡಿಕ್ಕಿ ಹೊಡೆದಿದೆ. ಈ ವೇಳೆ ಒಂದಕ್ಕೊಂದು ಕಾರ್ ಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಎರಡು ಸ್ವಿಫ್ಟ್ ಡಿಸೈರ್ ಕಾರ್ ಗಳು, ಒಂದು ಸರ್ಕಾರಿ ವಾಹನ ಜಖಂಗೊಂಡಿವೆ.

ಡ್ರಂಕ್ ಅಂಡ್ ಡ್ರೈವ್ ಪರೀಕ್ಷೆ ನಡೆಸಲಾಗಿದ್ದು, ಮಯೂರ್ ಪಟೇಲ್ ಮದ್ಯಪಾನ ಮಾಡಿರುವುದು ಕಂಡು ಬಂದಿದೆ. ಕಾರ್ ಗಳ ಚಾಲಕರು ದೂರು ನೀಡಿದ್ದಾರೆ. ಮಯೂರ್ ಪಟೇಲ್ ವಿರುದ್ಧ ಹಲಸೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಮಯೂರ್ ಪಟೇಲ್ ಅವರ ಫಾರ್ಚೂನರ್ ಕಾರ್ ಸೀಜ್ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೂರುದಾರ ಹಾಗೂ ಕಾರ್ ಮಾಲೀಕ ಶ್ರೀನಿವಾಸ್ ಹೇಳಿಕೆ ನೀಡಿ, ನಟ ಮಯೂರ್ ಪಟೇಲ್ ಅವರ ಕಾರ್ ಸಿಗ್ನಲ್ ನಲ್ಲಿ ನಿಂತಿದ್ದ ನಮ್ಮ ಕಾರ್ ಗೆ ಡಿಕ್ಕಿ ಹೊಡೆದಿದೆ. ಆಗ ಮುಂದೆ ಇದ್ದ ಕಾರ್ ಗೆ ನನ್ನ ಕಾರ್ ಡಿಕ್ಕಿ ಹೊಡೆದಿದೆ. ಸರಣಿ ಅಪಘಾತದಲ್ಲಿ ಒಟ್ಟು 4 ಕಾರ್ ಗಳಿಗೆ ಹಾನಿಯಾಗಿದೆ.

ನಟ ಮಯೂರ್ ಪಟೇಲ್ ಅವರೇ ಕಾರ್ ಚಾಲನೆ ಮಾಡುತ್ತಿದ್ದರು. ನಂತರ ಅವರು ಇಳಿದು ಬಂದು ಬೆಳಗ್ಗೆ ಸರಿ ಮಾಡಿ ಕೊಡುತ್ತೇನೆ ಎಂದರು. ಈಗಲೇ ಸೆಟ್ಲ್ ಮೆಂಟ್ ಮಾಡಿ ಎಂದು ನಾವೆಲ್ಲರೂ ಕೇಳಿದೆವು. ಅವರು ನಾನು ಸಿನಿಮಾ ನಟ ಮಯೂರ್ ಪಟೇಲ್ ಎಂದು ಹೇಳಿದರು. ಅಷ್ಟರಲ್ಲಿ ಪೊಲೀಸರು ಬಂದು ಎಲ್ಲರನ್ನು ಠಾಣೆಗೆ ಕರೆದುಕೊಂಡು ಹೋದರು. ನಾನು ಕಾರ್ ತೆಗೆದುಕೊಂಡು ಹದಿನೈದು ದಿನವಾಗಿದೆ. ಅಪಘಾತದ ವೇಳೆ ಪ್ಯಾಸೆಂಜರ್ ಕೂಡ ಇದ್ದರು. ಪತ್ನಿಯ ಒಡವೆ ಒತ್ತೆ ಇಟ್ಟು ಕಾರ್ ತೆಗೆದುಕೊಂಡಿದ್ದೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular