ಮಂಗಳೂರು: ಯುವತಿಯರು ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಗುಂಪೊಂದು ಹಲ್ಲೆ ನಡೆಸಿದ್ದು, ಸಂತ್ರಸ್ತೆ ನೀಡಿದ ದೂರಿನನ್ವಯ 9 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿರುವ ಗಹ್ಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೋಲ್ಪೆ ಎಂಬಲ್ಲಿ ಈ ಘಟನೆ ಆಗಸ್ಟ್ 12ರಂದು ನಡೆದಿದೆ. ಮೆಲ್ಕಾರ್ನಲ್ಲಿ ಕೆಲಸ ಮಾಡಿತ್ತಿದ್ದ ಕೋಲ್ಪೆಯ 18 ವರ್ಷದ ಯುವತಿ, ಆಗಸ್ಟ್ 12ರಂದು ಕೆಲಸ ಮುಗಿಸಿ ಅಂಗಡಿ ಮಾಲೀಕ ಜಹೀರ್ ಸ್ನೇಹಿತ ಸಿಪ್ಪಾನ್ ಕಾರಿನಲ್ಲಿ, ತಾಯಿ ಸಫಿಯಾ ಜೊತೆ ತೆರಳಿದ್ದರು. ಯುವತಿಯನ್ನು ಮನೆ ಬಳಿ ಬಿಟ್ಟು, ಬೈಕ್ ಮತ್ತು ಕಾರಿನಲ್ಲಿ ತೆರಳುತ್ತಿದ್ದ ವೇಳೆ ರಾತ್ರಿ 11 ಗಂಟೆ ಸುಮಾರಿಗೆ ಕೋಲ್ಪೆ ಎಂಬಲ್ಲಿ ಅವರನ್ನು ಅಡ್ಡಗಟ್ಟಿ ಪುಂಡರು ನೈತಿಕ ಪೊಲೀಸ್ಗಿರಿ ನಡೆಸಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಂದ ಯುವತಿಗೆ ಕಪಾಳಕ್ಕೆ ಹೊಡೆದು ಪ್ರಾಣ ಬೆದರಿಕೆ ಹಾಕಿದ್ದ ಪುಂಡರು ಜಗಳ ಬಿಡಿಸಲು ಬಂದಿದ್ದ ಜಮಾಲ್ರ್ರನ್ನು ತಳ್ಳಿ ಹಲ್ಲೆ ನಡೆಸಿದ್ದರು. ಪ್ರಜ್ಞೆತಪ್ಪಿ ಬಿದ್ದಿದ್ದ ಅಕ್ಕನನ್ನು ಮೇಲೆತ್ತಲು ಬಂದ ಸಹೋದರಿ ಫಾಸಿಲಾ ಕಪಾಳಕಕ್ಕೂ ಹೊಡೆದು ದೂಡಿದ್ದರು.
ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ವೇಳೆಯೇ ಈ ಸಂಬಂಧ ಸಂತ್ರಸ್ತೆ ವಿಡಿಯೋ ಹರಿಬಿಟ್ಟಿದ್ದರು. ಸಂತ್ರಸ್ತೆ ದೂರಿನ ಅನ್ವಯ ಉಪ್ಪಿನಂಗಡಿ ಠಾಣೆಯಲ್ಲಿ ಆರೋಪಿಗಳಾದ ಜಾಬಿರ್, ಸಿದ್ದಿಕ್, ಉನೈಸ್, ರಂಶಿಕ್, ಸಂಶುದ್ದೀನ್, ಜಾಫರ್, ಆಶಿತ್, ಆಚೂರು ಅಲಿಯಾಸ್ ಅಶ್ರಫ್, ಅಶ್ರಫ್ ಕೋಲ್ಪೆ ವಿರುದ್ಧ BNS ಸೆಕ್ಷನ್ 115(2), 126(2), 189(2), 190, 191(2), 351(2), 352)ರ ಅಡಿ ಎಫ್ಐಆರ್ ದಾಖಲಾಗಿದೆ.

