HomeCrime'ಧಾರ್ಮಿಕ ಕ್ಷೇತ್ರ' ದಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ; ಸಂಕಷ್ಟಕ್ಕೆ ಸಿಲುಕಿದ ಯುವ ಜೋಡಿ

‘ಧಾರ್ಮಿಕ ಕ್ಷೇತ್ರ’ ದಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ; ಸಂಕಷ್ಟಕ್ಕೆ ಸಿಲುಕಿದ ಯುವ ಜೋಡಿ

ಧಾರ್ಮಿಕ ಸ್ಥಳಗಳಲ್ಲಿ, ಸಾರ್ವಜನಿಕ ಪ್ರದೇಶದಲ್ಲಿ ಅಶ್ಲೀಲ ವಿಡಿಯೋಗಳು ಇತ್ತೀಚಿಗೆ ಹೆಚ್ಚಾಗಿದೆ. ಇಂದೋರ್‌ ನಲ್ಲಿ ಹುಡುಗ – ಹುಡುಗಿ ವಿರುದ್ಧ ದೂರು ದಾಖಲಾಗಿದ್ದು, ಅವರ ಪತ್ತೆ ಕಾರ್ಯ ಶುರುವಾಗಿದೆ.

ಅಶ್ಲೀಲ ಕೃತ್ಯ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ಅಪರಿಚಿತ ಹುಡುಗ ಮತ್ತು ಹುಡುಗಿಯ ವಿರುದ್ಧ ಎಂಜಿ ರಸ್ತೆ ಪೊಲೀಸ್ ಠಾಣೆಯಲ್ಲಿ  ಎಫ್‌ಐಆರ್ ದಾಖಲಾಗಿದೆ.  ವಕೀಲ ಅಭಿಜೀತ್ ಪಾಂಡೆ ದೂರು ದಾಖಲಿಸಿದ್ದಾರೆ.

ಕೃಷ್ಣಾಪುರ ಛತ್ರಿಯ ಮೇಲ್ಛಾವಣಿಯಲ್ಲಿ ಅಶ್ಲೀಲ ಕೃತ್ಯ ನಡೆಸುತ್ತಿದ್ದರಿಂದ ನಾನು ಅವರ ವಿಡಿಯೋ ಮಾಡಿದ್ದೇನೆ. ಇದು ನನ್ನ ಮನೆಯ ಸಮೀಪದಲ್ಲಿದೆ. ಈ ಜೋಡಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂಬ ಕಾರಣಕ್ಕೆ ವಿಡಿಯೋವನ್ನು ಪೊಲೀಸರಿಗೆ ನೀಡಿದ್ದೇನೆ ಎಂದು ಅಭಿಜೀತ್‌ ಪಾಂಡೆ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುವತಿಯ ಟಿಪ್ ಟಿಪ್ ಬರ್ಸಾ ಪಾನಿ  ವೈರಲ್ ವಿಡಿಯೋ ನಂತರ ಗ್ವಾಲಿಯರ್ ಕಲೆಕ್ಟರ್ ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಇಲ್ಲದೆ ವಿಡಿಯೋ ಮಾಡೋದನ್ನು ನಿಷೇಧಿಸಿದ್ದಾರೆ. ಪೊಲೀಸರು ದಂಪತಿಗಳ ವಿರುದ್ಧ ಕಠಿಣ ಮತ್ತು ತ್ವರಿತ ಕ್ರಮ ತೆಗೆದುಕೊಳ್ಳಬೇಕೆಂದು ವಕೀಲರು ಆಗ್ರಹಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ದಂಪತಿ ಹುಡುಕಾಟ ಶುರು ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular