ಬೆಂಗಳೂರು: ಖಾಸಗಿ ಫೈನಾನ್ಸ್ ಕಂಪನಿ ಆ್ಯಪ್ ಹ್ಯಾಕ್ ಮಾಡಿ ಕೇವಲ ಎರಡೂವರೆ ಗಂಟೆಯಲ್ಲಿ 49 ಕೋಟಿ ರೂಪಾಯಿ ದೋಚಿದ ಸೈಬರ್ ವಂಚನೆ ಜಾಲದ ಇಬ್ಬರನ್ನು ಬಂಧಿಸುವಲ್ಲಿ ಬೆಂಗಳೂರು ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿಯ ಇಸ್ಮಾಯಿಲ್ ರಶೀದ್ ಅತ್ತಾರ್, ರಾಜಸ್ಥಾನದ ಉದಯಪುರದ ಸಂಜಯ್ ಪಾಟೀಲ್ ಬಂಧಿತ ಆರೋಪಿಗಳು. ಖಾಸಗಿ ಫೈನಾನ್ಸ್ ಕಂಪನಿ ಆ್ಯಪ್ ಹ್ಯಾಕ್ ಮಾಡಿದ್ದ ಹ್ಯಾಕಾರ್ ಗಳು 656 ನಕಲಿ ಖಾತೆಗೆ 49 ಕೋಟಿ ರೂಪಾಯಿ ವರ್ಗಾವಣೆ ಮಾಡಿದ್ದರು.
ದುಬೈ ಮಾಸ್ಟರ್ ಮೈಂಡ್ ಗಳಿಂದ ಹ್ಯಾಕ್ ಮಾಡಲು ನೆರವು ನೀಡಲಾಗಿದೆ. ಫೈನಾನ್ಸ್ ಕಂಪನಿ ದೂರು ನೀಡುತ್ತಿದ್ದಂತೆ ಪೊಲೀಸರು ತನಿಖೆ ಕೈಗೊಂಡು ಬೆಳಗಾವಿ, ರಾಜಸ್ಥಾನದ ಇಬ್ಬರನ್ನು ಬಂಧಿಸಿ 10 ಕೋಟಿ ರೂಪಾಯಿ ಜಪ್ತಿ ಮಾಡಿದ್ದಾರೆ. ಬಾಕಿ 39 ಕೋಟಿ ರೂ. ಹಣ ಜಪ್ತಿಗೆ ಮತ್ತು ಉಳಿದವರ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.
