HomeKarnatakaBREAKING : ಚಂದಾಪುರ ಪುರಸಭೆಯಿಂದ ಕಡತಗಳನ್ನು ಕದ್ದೊಯ್ದ ಪ್ರಕರಣ : ಇಬ್ಬರು ಅಧಿಕಾರಿಗಳು ಅಮಾನತು

BREAKING : ಚಂದಾಪುರ ಪುರಸಭೆಯಿಂದ ಕಡತಗಳನ್ನು ಕದ್ದೊಯ್ದ ಪ್ರಕರಣ : ಇಬ್ಬರು ಅಧಿಕಾರಿಗಳು ಅಮಾನತು

ಕಡತಗಳನ್ನು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದಾಪುರ ಪುರಸಭೆಯ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಅಮೃತ, ಕಿರಿಯ ಅಧಿಕಾರಿ ಹಾಗೂ  ರಮೇಶ್ ರಾಜ್ ಹಿರಿಯ ಅಧಿಕಾರಿ. ಈ ಇಬ್ಬರನ್ನು ಅಮಾನತು ಮಾಡಲಾಗಿದೆ.ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರ ಪುರಸಭೆಯಲ್ಲಿ ಕಡತದ ಪುಸ್ತಕಗಳನ್ನು ಕದ್ದು ತೆಗೆದುಕೊಂಡು ಹೋಗುವಾಗ ಸಿಕ್ಕಿಬಿದ್ದಿದ್ದರು.ಪುರಸಭೆಯ ಮುಂಭಾಗದಲ್ಲಿಯೇ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಡ್ಡಗಟ್ಟಿ ಹಿಡಿದು  ಕಡತಗಳನ್ನು ಸೂರ್ಯನಗರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿತ್ತು .ಚಂದಾಪುರ ಪುರಸಭೆಯಲ್ಲಿ ನಡೆದಿದ್ದ ಅಕ್ರಮವನ್ನು ಪುರಸಭೆ ಸದಸ್ಯರು ಬಯಲು ಮಾಡಿದ್ದರು. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular