HomeEntertainmentಸೆಪ್ಟೆಂಬರ್ 13ಕ್ಕೆ 'ಫೈಟರ್' ಚಿತ್ರದ ವಿಡಿಯೋ ಹಾಡು ರಿಲೀಸ್

ಸೆಪ್ಟೆಂಬರ್ 13ಕ್ಕೆ ‘ಫೈಟರ್’ ಚಿತ್ರದ ವಿಡಿಯೋ ಹಾಡು ರಿಲೀಸ್

ನೂತನ್ ಉಮೇಶ್, ನಿರ್ದೇಶನದ ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ ಬಹು ನಿರೀಕ್ಷಿತ ‘ಫೈಟರ್’ ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ತೆರೆ ಮೇಲೆ ಬರಲಿದ್ದು, ವಿನೋದ್  ಪ್ರಭಾಕರ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಸೆಪ್ಟೆಂಬರ್ 13ರಂದು ಸಂಜೆ 6 ಗಂಟೆಗೆ ಡಿಜಿಕೆ ಯುಟ್ಯೂಬ್ ಚಾನೆಲ್ ನಲ್ಲಿ ಈ ಚಿತ್ರದ ವಿಡಿಯೋ ಹಾಡೊಂದನ್ನು ಬಿಡುಗಡೆ ಮಾಡುವುದಾಗಿ  ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಕಾಶ್ ಎಂಟರ್ಪ್ರೈಸಸ್ ಬ್ಯಾನರ್ ನಡಿ ಸೋಮಶೇಖರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ವಿನೋದ್  ಪ್ರಭಾಕರ್ ಗೆ  ಜೋಡಿಯಾಗಿ ಲೇಖಾ ಚಂದ್ರ ಅಭಿನಯಿಸಿದ್ದು, ಶರತ್ ಲೋಹಿತಾಶ್ವ, ರಾಜೇಶ್ ನಟರಂಗ, ಗಿರಿಜಾ ಲೋಕೇಶ್, ಶ್ರೀಧರ್, ಅನಿಲ್ ಕುಮಾರ್, ದೀಪಕ್ ಶೆಟ್ಟಿ ತೆರೆ ಹಂಚಿಕೊಂಡಿದ್ದಾರೆ. ಗುರುಕಿರಣ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular