BIG UPDATE : ಬಾಂಗ್ಲಾದೇಶದಲ್ಲಿ ಕಾಲೇಜಿನ ಮೇಲೆ ಯುದ್ಧ ವಿಮಾನ ಪತನ : ಮೃತಪಟ್ಟವರ ಸಂಖ್ಯೆ 25 ಕ್ಕೆ ಏರಿಕೆ.!

ಢಾಕಾ: ಢಾಕಾದ ಕಾಲೇಜಿನ ಮೇಲೆ ವಾಯು ಸೇನೆ ತರಬೇತಿ ವಿಮಾನ ಪತನಗೊಂಡ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 25 ಕ್ಕೆ ಏರಿಕೆಯಾಗಿದೆ. 170 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಾಂಗ್ಲಾದೇಶದ ಢಾಕಾದಲ್ಲಿ F-7 ಜೆಟ್ ವಿಮಾನ ತರಬೇತಿ ನಡೆಸುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ಕಾಲೇಜಿನ ಮೇಲೆ ಪತನಗೊಂಡಿದೆ. ವಿಮಾನ ದುರಂತದಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ವಿದ್ಯಾರ್ಥಿಗಳು ಸೇರಿ 25 ಜನರು ಮೃತಪಟ್ಟಿದ್ದಾರೆ. ಹಲವು ವಿದ್ಯಾರ್ಥಿಗಳು ಸುಟ್ಟ ಗಾಯಗಳಿಂದ ನರಳತ್ತಿದ್ದು, ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ.

ಪೈಲಟ್ … ಜನನಿಬಿಡ ಪ್ರದೇಶಗಳಿಂದ ವಿಮಾನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನ ಮಾಡಿದರು. ಅವರ ಪ್ರಯತ್ನದ ಹೊರತಾಗಿಯೂ, ವಿಮಾನ … ಮೈಲ್ಸ್ಟೋನ್ ಶಾಲೆ ಮತ್ತು ಕಾಲೇಜಿಗೆ ಸೇರಿದ ಎರಡು ಅಂತಸ್ತಿನ ಕಟ್ಟಡಕ್ಕೆ ಅಪ್ಪಳಿಸಿತು” ಎಂದು ಮೂಲಗಳು ತಿಳಿಸಿದೆ. ಘಟನೆಯಲ್ಲಿ ಸಾವನ್ನಪ್ಪಿದವರಲ್ಲಿ ಪೈಲಟ್ ಕೂಡ ಸೇರಿದ್ದಾರೆ ಎಂದು ಮಿಲಿಟರಿ ತಿಳಿಸಿದೆ, ಅದರ ಕಾರಣವನ್ನು ತನಿಖೆ ಮಾಡಲು ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದರು. ವಿಮಾನವು ಮಧ್ಯಾಹ್ನ ಢಾಕಾದ ಉತ್ತರ ಪ್ರದೇಶದ ಮೈಲ್ಸ್ಟೋನ್ ಶಾಲೆ ಮತ್ತು ಕಾಲೇಜಿನ ಆವರಣದಲ್ಲಿ ಅಪ್ಪಳಿಸಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read