HomeLive NewsBIG NEWS : ರಾಜ್ಯ ಸರ್ಕಾರದ 'ಋತುಚಕ್ರ ರಜೆ' ಪ್ರಶ್ನಿಸಿ ಮಹಿಳಾ ಉದ್ಯೋಗಿಗಳಿಂದಲೇ ಹೈಕೋರ್ಟ್‘ಗೆ ಅರ್ಜಿ...

BIG NEWS : ರಾಜ್ಯ ಸರ್ಕಾರದ ‘ಋತುಚಕ್ರ ರಜೆ’ ಪ್ರಶ್ನಿಸಿ ಮಹಿಳಾ ಉದ್ಯೋಗಿಗಳಿಂದಲೇ ಹೈಕೋರ್ಟ್‘ಗೆ ಅರ್ಜಿ ಸಲ್ಲಿಕೆ.!

ಬೆಂಗಳೂರು  : ರಾಜ್ಯ ಸರ್ಕಾರದ ‘ಋತುಚಕ್ರ ರಜೆ’ (Menstrual Leave) ನೀತಿಯನ್ನು ಪ್ರಶ್ನಿಸಿ ಇದೀಗ ಮಹಿಳಾ ಉದ್ಯೋಗಿಗಳೇ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಹೌದು.  ಮಹಿಳಾ ನೌಕರರ ಆರೋಗ್ಯ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಋತುಚಕ್ರ ರಜೆ’ ನೀತಿ ಈಗ ಕಾನೂನು ಸಂಘರ್ಷಕ್ಕೆ ನಾಂದಿ ಹಾಡಿದೆ. ವಿಶೇಷವೆಂದರೆ, ಸರ್ಕಾರದ ಈ ಸೌಲಭ್ಯವನ್ನು ವಿರೋಧಿಸಿ ಮಹಿಳಾ ಉದ್ಯೋಗಿಗಳೇ ನ್ಯಾಯಾಲಯದ ಮೊರೆ ಹೋಗಿದ್ದಾರೆ.ಈ ಅರ್ಜಿಯು ಈಗ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದು, ಮಹಿಳಾ ಹಕ್ಕುಗಳು ಮತ್ತು ಉದ್ಯೋಗಾವಕಾಶಗಳ ನಡುವಿನ ಸಮತೋಲನದ ಬಗ್ಗೆ ಹೊಸ ಸಂಘರ್ಷಕ್ಕೆ ನಾಂದಿ ಹಾಡಿದೆ.

ಸರ್ಕಾರದ ಈ ಕ್ರಮವು ಲಿಂಗ ತಾರತಮ್ಯಕ್ಕೆ ಎಡೆಮಾಡಿಕೊಡುತ್ತದೆ ಮತ್ತು ಈ ನೀತಿಯನ್ನು ರೂಪಿಸುವಾಗ ಸರ್ಕಾರ ಮಹಿಳೆಯರ ಅಭಿಪ್ರಾಯವನ್ನು ಪಡೆದಿಲ್ಲ ಎಂದು ಆಕ್ಷೇಪಿಸಿ ವರ್ಷಾ ಸೇರಿದಂತೆ 17 ಮಹಿಳಾ ಉದ್ಯೋಗಿಗಳು ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇಂತಹ ರಜೆ ನೀತಿಗಳಿಂದಾಗಿ ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಮಹಿಳಾ ಉದ್ಯೋಗಿಗಳ ನೇಮಕಾತಿಗೆ ಸಂಸ್ಥೆಗಳು ಹಿಂದೇಟು ಹಾಕುವ ಸಾಧ್ಯತೆಯಿದೆ ಎಂದು ಅರ್ಜಿದಾರರು ಕಳವಳ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲಿಂಗ ತಾರತಮ್ಯ: ಋತುಚಕ್ರದ ಆಧಾರದ ಮೇಲೆ ರಜೆ ನೀಡುವುದು ಕೆಲಸದ ಸ್ಥಳದಲ್ಲಿ ಲಿಂಗ ತಾರತಮ್ಯಕ್ಕೆ (Gender Discrimination) ಕಾರಣವಾಗುತ್ತದೆ. ಇದು ಮಹಿಳೆಯರನ್ನು ‘ದುರ್ಬಲರು’ ಎಂಬಂತೆ ಬಿಂಬಿಸುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ನೌಕರಿ ಕಳೆದುಕೊಳ್ಳುವ ಭೀತಿ : ಖಾಸಗಿ ಕಂಪನಿಗಳು ಇಂತಹ ಕಡ್ಡಾಯ ರಜೆ ನಿಯಮಗಳಿಂದಾಗಿ ಮಹಿಳಾ ಅಭ್ಯರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳಲು ಹಿಂದೇಟು ಹಾಕಬಹುದು. ಇದರಿಂದ ಮಹಿಳೆಯರ ಉದ್ಯೋಗಾವಕಾಶಗಳು ಕುಂಠಿತಗೊಳ್ಳುತ್ತವೆ ಎಂಬುದು ಅರ್ಜಿದಾರರ ಆತಂಕ.

ಅಭಿಪ್ರಾಯ ಪಡೆದಿಲ್ಲ : ಇಂತಹ ಮಹತ್ವದ ನೀತಿಯನ್ನು ರೂಪಿಸುವ ಮೊದಲು ಸರ್ಕಾರ ಮಹಿಳಾ ಉದ್ಯೋಗಿಗಳ ಅಥವಾ ಸಂಬಂಧಪಟ್ಟ ಪಾಲುದಾರರ ಯಾವುದೇ ಅಭಿಪ್ರಾಯವನ್ನು ಪಡೆದಿಲ್ಲ ಎಂದು ಅವರು ಆರೋಪಿಸಿದ್ದಾರೆ.

ನೇಮಕಾತಿಯಲ್ಲಿ ಹಿನ್ ಡೆ: ಮಹಿಳೆಯರಿಗೆ ಹೆಚ್ಚುವರಿ ರಜೆ ನೀಡುವುದರಿಂದ ಅವರ ವೃತ್ತಿಜೀವನದ ಬೆಳವಣಿಗೆ, ಬಡ್ತಿ ಮತ್ತು ದೊಡ್ಡ ಜವಾಬ್ದಾರಿಗಳನ್ನು ನೀಡುವಲ್ಲಿ ಸಂಸ್ಥೆಗಳು ತಾರತಮ್ಯ ಮಾಡುವ ಸಾಧ್ಯತೆಯಿದೆ ಎಂದು 17 ಮಹಿಳಾ ಉದ್ಯೋಗಿಗಳು ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ವಿವರಿಸಲಾಗಿದೆ.

ಕರ್ನಾಟಕ ಸರ್ಕಾರವು ಇತ್ತೀಚೆಗೆ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯದ ನೋಂದಾಯಿತ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ತಿಂಗಳಿಗೆ ಒಂದು ದಿನದ ವೇತನ ಸಹಿತ ‘ಋತುಚಕ್ರ ರಜೆ’ ಘೋಷಿಸಿತ್ತು. ಇದನ್ನು ಸ್ವಾಗತಿಸುವ ಒಂದು ವರ್ಗದ ನಡುವೆಯೇ, ಈಗ ವೃತ್ತಿಪರ ಮಹಿಳೆಯರ ತಂಡವೊಂದು ಇದು ಉದ್ಯೋಗ ಮಾರುಕಟ್ಟೆಯಲ್ಲಿ ಮಹಿಳೆಯರಿಗೆ ಹಿನ್ನಡೆಯಾಗಲಿದೆ ಎಂದು ನ್ಯಾಯಾಲಯದ ಮೆಟ್ಟಿಲೇರಿದೆ. ಕೋರ್ಟ್ ಈ ಕುರಿತು ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular