HomeKarnatakaಗುಜರಾತ್ ವಾಹನಗಳಿಗೆ ನಿಯಮ ಮೀರಿ FC ನವೀಕರಣ: RTO ಇನ್ಸ್ ಪೆಕ್ಟರ್ ಅಮಾನತು

ಗುಜರಾತ್ ವಾಹನಗಳಿಗೆ ನಿಯಮ ಮೀರಿ FC ನವೀಕರಣ: RTO ಇನ್ಸ್ ಪೆಕ್ಟರ್ ಅಮಾನತು

ಬೆಂಗಳೂರು: ಗುಜರಾತ್ ರಾಜ್ಯದ ವಾಹನಗಳಿಗೆ ನಿಯಮಬಾಹಿರವಾಗಿ ಎಫ್.ಸಿ. ನವೀಕರಿಸಿಕೊಟ್ಟು ಕರ್ತವ್ಯ ಲೋಪ ಎಸಗಿದ ಹಿರಿಯ ಮೋಟಾರ್ ವಾಹನ ನಿರೀಕ್ಷಕ ನಿಸಾರ್ ಅಹ್ಮದ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಸಾರಿಗೆ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಗುಜರಾತ್ ರಾಜ್ಯದ ಸಾರಿಗೆ ಕಚೇರಿಯ ಇ- ಡಿಟೆಕ್ಷನ್ ತಂಡ ವಾಹನ ಇ- ಡಿಟೆಕ್ಷನ್ ಪೋರ್ಟರ್ ನಲ್ಲಿ ಲಭ್ಯವಿರುವ ದತ್ತಾಂಶ ಪರಿಶೀಲಿಸಿದಾಗ 41 ವಾಹನಗಳನ್ನು ಕರ್ನಾಟಕ ಆರ್‌ಟಿಒ ಕಚೇರಿಯಲ್ಲಿ ತಪಾಸಣೆ ನಡೆಸಿ ಎಫ್‌ಸಿ ನೀಡಿರುವುದು ಕಂಡುಬಂದಿದೆ. ಅದೇ ದಿನ ಗುಜರಾತ್ ರಾಜ್ಯದ ಟೋಲ್ ಪ್ಲಾಜಾಗಳ ಮೂಲಕ ಆ ವಾಹನಗಳು ಹಾದು ಹೋಗಿವೆ. ಆ ಎಲ್ಲಾ ವಾಹನಗಳಿಗೆ ಎಫ್.ಸಿ. ನೀಡಲು ನಿಸಾರ್ ಅಹ್ಮದ್ ಅವರೇ ಅನುಮೋದಿಸಿದ್ದಾರೆ ಎಂದು ಗುಜರಾತ್ ಸಾರಿಗೆ ಇಲಾಖೆ ಉಪ ನಿರ್ದೇಶಕರು ಹೇಳಿದ್ದರು.

ಈ ಮಾಹಿತಿ ತಿಳಿದ ಕೂಡಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕ್ರಮಕ್ಕೆ ಸೂಚನೆ ನೀಡಿದ್ದರು. ಅಂತೆಯೇ ನಗರ ವಿಭಾಗದ ಜಂಟಿ ಸಾರಿಗೆ ಆಯುಕ್ತರಿಗೆ ವರದಿ ನೀಡಲು ಸಾರಿಗೆ ಇಲಾಖೆ ಆಯುಕ್ತರು ಆದೇಶಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಕುರಿತಾಗಿ ತನಿಖೆ ನಡೆಸಿದ ಜಂಟಿ ಆಯುಕ್ತರು, ಬೆಂಗಳೂರು ಕೇಂದ್ರ ಆರ್.ಟಿ.ಒ. ಕಚೇರಿಯ ಹಿರಿಯ ಮೋಟಾರ್ ವಾಹನ ನಿರೀಕ್ಷಕ ನಿಸಾರ್ ಅಹಮದ್ ಅವರು 41 ವಾಹನಗಳ ಅರ್ಹತಾ ಪತ್ರ ನವೀಕರಿಸಿರುವುದು ವಾಹನ 4.0 ತಂತ್ರಾಂಶದಿಂದ ದೃಢಪಟ್ಟಿದೆ. ಅದೇ ದಿನ ಗುಜರಾತ್ ಟೋಲ್ ಪ್ಲಾಜಾಗಳ ಮೂಲಕ ವಾಹನಗಳು ಹಾದುಹೋಗಿವೆ. ಭೌತಿಕವಾಗಿ ವಾಹನಗಳ ಪರಿಶೀಲನೆ ನಡೆಸದೇ ನಿಯಮಬಾಹಿರವಾಗಿ ಎಫ್.ಸಿ. ನವೀಕರಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ವರದಿ ನೀಡಿದ್ದರು. ಇದನ್ನು ಆಧರಿಸಿ ನಿಸಾರ್ ಅಹ್ಮದ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular