HomeEntertainmentಜನಪ್ರಿಯ ಧಾರಾವಾಹಿ ಟೈಟಲ್ ಟ್ರ‍್ಯಾಕ್‌ ಹಾಡಿದ ಜೀಶನ್ ಅಲಿ

ಜನಪ್ರಿಯ ಧಾರಾವಾಹಿ ಟೈಟಲ್ ಟ್ರ‍್ಯಾಕ್‌ ಹಾಡಿದ ಜೀಶನ್ ಅಲಿ

ಪಾಕಿಸ್ತಾನದ ಗಾಯಕ ಜೀಶನ್ ಅಲಿ ಅಲ್ಲಿಯ ಖ್ಯಾತ ಧಾರಾವಾಹಿ ನಟ ಫವಾದ್ ಖಾನ್ ಎದುರು ಹಾಡುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ.

’ಹಮ್ಸಫರ್‌’ ಹೆಸರಿನ ಧಾರಾವಾಹಿಯಲ್ಲಿ ಮಾಹಿರಾ ಖಾನ್ ಎದುರು ಮುಂಚೂಣಿ ನಟನಾಗಿ ನಟಿಸಿದ ಫವಾದ್ ಖಾನ್ ಪಾಕಿಸ್ತಾನದಲ್ಲಿ ಹೆಸರು ಮಾಡಿದ್ದಾರೆ. ಇದೇ ಧಾರಾವಾಹಿಯ ಟೈಟಲ್ ಟ್ರ‍್ಯಾಕ್‌ಅನ್ನು ಜೀಶನ್ ಫವಾದ್‌ಗಾಗಿ ಹಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೀಶನ್‌ರ ಈ ಗಾಯನವನ್ನು ಫವಾದ್ ಖಾನ್ ಭಾರೀ ಇಷ್ಟಪಟ್ಟಿದ್ದಾರೆ ಎಂಬುದು ಆ ವೇಳೆ ಅವರ ಮುಖಭಾವದಿಂದ ತಿಳಿದು ಬಂದಿದೆ.

“ಫವಾದ್ ಅಫ್ಝಲ್ ಖಾನ್ ಎದುರು ಹಾಡುವಾಗ ನನ್ನ ಫ್ಯಾನ್ ಕ್ಷಣಗಳನ್ನು ಜೀವಿಸಿದೆ,” ಎಂದು ಕ್ಯಾಪ್ಷನ್ ಕೊಟ್ಟು ಈ ವಿಡಿಯೋವನ್ನು ಜೀಶನ್ ಅಲಿ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular