HomeLatest Newsಶಾಲೆ ಬಳಿ ಹೃದಯವಿದ್ರಾವಕ ಘಟನೆ: ತಂದೆ ಅಕಾಲಿಕ ಸಾವು, ಸಿಸಿಟಿವಿಯಲ್ಲಿ ದೃಶ್ಯ

ಶಾಲೆ ಬಳಿ ಹೃದಯವಿದ್ರಾವಕ ಘಟನೆ: ತಂದೆ ಅಕಾಲಿಕ ಸಾವು, ಸಿಸಿಟಿವಿಯಲ್ಲಿ ದೃಶ್ಯ

ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ಮೈ ನಡುಗಿಸುವಂತಹ ದಾರುಣ ಘಟನೆಯೊಂದು ನಡೆದಿದೆ. ಸೋಮವಾರ ಬೆಳಿಗ್ಗೆ ತನ್ನ ಪುಟ್ಟ ಮಗಳನ್ನು ಶಾಲೆಗೆ ಬಿಡಲು ಬಂದಿದ್ದ 40 ವರ್ಷದ ವ್ಯಕ್ತಿಯೊಬ್ಬರು ಶಾಲೆಯ ಗೇಟ್ ಬಳಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಇಡೀ ಘಟನೆಯು ಶಾಲೆಯ ಪ್ರವೇಶ ದ್ವಾರದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ನಡೆದಿದ್ದೇನು? ವೈರಲ್ ವಿಡಿಯೋದಲ್ಲಿ ಕಂಡುಬರುವಂತೆ, ವ್ಯಕ್ತಿಯು ತನ್ನ ಮಗಳ ಶಾಲೆಯ ಬ್ಯಾಗ್ ಹಿಡಿದುಕೊಂಡು ಮಗಳ ಜೊತೆ ಗೇಟ್ ವರೆಗೆ ಬರುತ್ತಾರೆ. ಮಗಳು ಶಾಲೆಯ ಒಳಗೆ ಹೋದ ತಕ್ಷಣ, ಅವರು ಗೇಟ್ ಪಕ್ಕದಲ್ಲೇ ನಿಶ್ಯಕ್ತರಾಗಿ ಕುಳಿತುಕೊಳ್ಳುತ್ತಾರೆ. ಕುಳಿತ ಕೆಲವೇ ಸೆಕೆಂಡುಗಳಲ್ಲಿ ಅವರು ಪ್ರಜ್ಞೆ ತಪ್ಪಿ ಕೆಳಕ್ಕೆ ಕುಸಿಯುತ್ತಾರೆ. ಕೂಡಲೇ ಅಲ್ಲಿದ್ದವರು ಸಹಾಯಕ್ಕೆ ಧಾವಿಸಿದರಾದರೂ ಅಷ್ಟರಲ್ಲಾಗಲೇ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಮೃತ ವ್ಯಕ್ತಿಯ ಗುರುತು ಇನ್ನು ಲಭ್ಯವಾಗಿಲ್ಲ.

ಹೆಚ್ಚುತ್ತಿದೆ ಹಠಾತ್ ಹೃದಯಾಘಾತದ ಭೀತಿ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಇಂತಹ ಹಠಾತ್ ಹೃದಯಾಘಾತದ ಪ್ರಕರಣಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿವೆ. ಕಳೆದ ಅಕ್ಟೋಬರ್‌ನಲ್ಲಿ ದೆಹಲಿಯ ತಿಸ್ ಹಜಾರಿ ನ್ಯಾಯಾಲಯದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಎಎಸ್‌ಐ ರಾಜೇಶ್ ಕುಮಾರ್ ಎಂಬುವವರು ಸಹ ಇದೇ ರೀತಿ ಕುಸಿದು ಬಿದ್ದು ಮೃತಪಟ್ಟಿದ್ದರು. ಹರಿಯಾಣದ ಫರಿದಾಬಾದ್‌ನಲ್ಲಿ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕೂಡ ಇತ್ತೀಚೆಗೆ ಸ್ಥಳದಲ್ಲೇ ಸಾವನ್ನಪ್ಪಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಯಸ್ಸಿನ ಭೇದವಿಲ್ಲದೆ ಸಂಭವಿಸುತ್ತಿರುವ ಈ ‘ಸೈಲೆಂಟ್ ಹಾರ್ಟ್ ಅಟ್ಯಾಕ್’ ಪ್ರಕರಣಗಳು ಜನಸಾಮಾನ್ಯರಲ್ಲಿ ಭೀತಿ ಹುಟ್ಟಿಸಿವೆ. ವೈದ್ಯಕೀಯ ತಜ್ಞರ ಪ್ರಕಾರ, ಒತ್ತಡದ ಜೀವನಶೈಲಿ ಮತ್ತು ಹೃದಯದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular